ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಜಮೀನಿನ ಬಾಡಿಗೆ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ

Update: 2023-11-30 15:11 GMT

ಬೆಳಗಾವಿ: ವಿಧಾನಮಂಡಳದ ಅಧಿವೇಶನದ ಸಂದರ್ಭದಲ್ಲಿ ನಡೆಯಲಿರುವ ವಿವಿಧ ಪ್ರತಿಭಟನೆಗಳಿಗೆ ಬಳಸಲಾಗುವ ರೈತರ ಜಮೀನಿನ ಬಾಡಿಗೆಯನ್ನು ಹೆಚ್ಚಳ ಮಾಡಲಾಗಿದೆ. ರೈತರ ಮನವಿಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕಳೆದ ವರ್ಷ ಪ್ರತಿಭಟನೆಯ ಟೆಂಟ್ ನಿರ್ಮಾಣಕ್ಕೆ ಬಳಸಲಾಗಿದ್ದ ರೈತರ ಜಮೀನಿಗೆ ಪ್ರತಿ ಗುಂಟೆಗೆ 1200 ರೂ.ನೀಡಲಾಗಿತ್ತು. ಆ ಜಮೀನಿನಲ್ಲಿ ಯಾವುದೇ ಫಸಲು ಬೆಳೆದಿರಲಿಲ್ಲ. ಈ ಬಾರಿ ಹಲಗಾ ಗ್ರಾಮದ ರೈತರ 3.28 ಎಕರೆ ಜಮೀನನ್ನು ಪ್ರತಿಭಟನಾ ಟೆಂಟ್ ಗಾಗಿ ಬಳಸಲಾಗುತ್ತಿದೆ. ಈ ಜಮೀನಿನಲ್ಲಿ ರೈತರು ಫಸಲು ಬೆಳೆದಿದ್ದರಿಂದ ಪ್ರತಿ ಗುಂಟೆಗೆ 3 ಸಾವಿರ ರೂ.ಗಳಂತೆ ನೀಡುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ನೀಡಿದ್ದರು.

ಅದರಂತೆ, ರೈತರಿಗೆ ಪ್ರತಿ ಗುಂಟೆಗೆ 3 ಸಾವಿರ ರೂ. ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ. ಇದಕ್ಕೂ ಮೊದಲು ರೈತರು ಜಮೀನಿನ ಬಾಡಿಗೆ ಹೆಚ್ಚಿಸುವಂತೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಲ್ಲಿ ಮನವಿ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News