ಎಮ್ಮೆಯ ಮಾಲಕತ್ವದ ವಿಚಾರದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಗ್ರಾಮಸ್ಥರ ನಡುವೆ ಘರ್ಷಣೆ

Update: 2025-01-01 09:35 GMT

ಸಾಂದರ್ಭಿಕ ಚಿತ್ರ (PTI)

ಬಳ್ಳಾರಿ: ಎಮ್ಮೆಯ ಮಾಲಕತ್ವದ ವಿಚಾರವಾಗಿ ಬಳ್ಳಾರಿ ಜಿಲ್ಲೆಯ ಬೊಮ್ಮನಹಾಳ್ ಹಾಗೂ ಆಂಧ್ರಪ್ರದೇಶದ ಮೆಟಹಾಳ್ ಗ್ರಾಮದ ಜನರ ನಡುವೆ ನಡೆದ ಘರ್ಷಣೆಯು ಜಿಲ್ಲೆಯ ಮೋಕಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಡಿಎನ್ಎ ಪರೀಕ್ಷೆ ನಡೆಸಿ ಎಮ್ಮೆಯ ಪೋಷಕತ್ವ ಪತ್ತೆ ಮಾಡಬೇಕು ಎಂದು ಬೊಮ್ಮನಹಾಳ್ ಮತ್ತು ಮೆಟಹಾಳ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು 

ಐದು ವರ್ಷ ವಯಸ್ಸಿನ ಎಮ್ಮೆಯನ್ನು, ಜನವರಿಯಲ್ಲಿ ತಮ್ಮ ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ಬಲಿ ನೀಡಲು ನಿರ್ಧರಿಸಿದ ನಂತರ ಇತ್ತೀಚೆಗೆ ಬೊಮ್ಮನಹಾಲ್ನಲ್ಲಿ ಬಿಡಲಾಯಿತು. ಆದರೆ ಕೆಲ ದಿನಗಳ ಹಿಂದೆ ಬೊಮ್ಮನಹಾಳ್ ನಿಂದ ನಾಪತ್ತೆಯಾಗಿದ್ದ ಗೂಳಿ ಮೆಟಹಾಳ್ ನಲ್ಲಿ ಪತ್ತೆಯಾಗಿತ್ತು.

ಬೊಮ್ಮನಹಾಳ್ನ ಗುಂಪೊಂದು ಮೇಟಹಾಳ್ಗೆ ತೆರಳಿ ಗೂಳಿಯನ್ನು ವಾಪಸ್ ಕೊಂಡೊಯ್ಯಲು ಮುಂದಾದಾಗ ಗ್ರಾಮಸ್ಥರ ನಡುವೆ ಘರ್ಷಣೆ ನಡೆದು ಹಲವರು ಗಾಯಗೊಂಡಿದ್ದಾರೆ.

ಎಮ್ಮೆ ಈಗ ಬೊಮ್ಮನಹಾಳ್ ನಿಂದ 20 ಕಿ.ಮೀ ದೂರದಲ್ಲಿರುವ ಮೆಟಹಾಳ್ ನಲ್ಲಿ ಇದೆ. ಗೂಳಿಯ ತಾಯಿ ಎಮ್ಮೆಯು ತಮ್ಮ ಗ್ರಾಮದಲ್ಲಿ ಇರುವುದರಿಂದ ಬೊಮ್ಮನಹಾಳ್ ಗ್ರಾಮಸ್ಥರು ಅದು ತಮಗೆ ಸೇರಿದ್ದು ಎಂದು ಹೇಳಿಕೊಂಡರೂ, ಅದನ್ನು ಕಟ್ಟಿ ಹಾಕಿದ ಮೇಟಹಾಳ್ ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಜಗಳ ತಾರಕಕ್ಕೇರಿದಾಗ ಬೊಮ್ಮನಹಾಳ್ ಮತ್ತು ಮೆಟಹಾಳ್ ಗ್ರಾಮಸ್ಥರು ಡಿಎನ್ಎ ಪರೀಕ್ಷೆ ನಡೆಸಿ ಗೂಳಿಯ ಮೂಲ ನಿರ್ಧರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೊಮ್ಮನಹಾಲ್ನ ಹನುಮಂತ ಆರ್, ‘ನಮ್ಮ ಗ್ರಾಮದ ಸಾಕಮ್ಮದೇವಿ ಜಾತ್ರೆಯಲ್ಲಿ ಐದು ವರ್ಷಕ್ಕೊಮ್ಮೆ ಎಮ್ಮೆ ಬಲಿ ಕೊಡಲಾಗುತ್ತದೆ. ಆದರೆ ಈ ಬಾರಿ ಬಲಿ ಕೊಡಲು ಗುರುತಿಸಲಾದ ಎಮ್ಮೆಯನ್ನು, ಮೂರು ವರ್ಷಕ್ಕೊಮ್ಮೆ ಇದೇ ರೀತಿಯ ಜಾತ್ರೆ ನಡೆಯುವ ಮೆಟಹಾಳ್ನ ಜನರು ಹಿಡಿದಿದ್ದಾರೆ. ಬೊಮ್ಮನಹಾಳ್ ಮತ್ತು ಮೇಟಹಾಳ್ ಗ್ರಾಮಸ್ಥರ ನಡುವೆ ಎಮ್ಮೆಯ ವಿಚಾವಾಗಿ ಉಂಟಾಗಿರುವ ಜಗಳ ಸಮಸ್ಯೆ ಶೀಘ್ರ ಇತ್ಯರ್ಥವಾಗಲಿದೆ,” ಎಂದು ಭರವಸೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News