ಕರ್ನಾಟಕ ಬಂದ್ | ರೈಲು ತಡೆಗೆ ಯತ್ನಿಸಿದ ರೈತರ ಬಂಧನ
Update: 2023-09-29 14:42 GMT
ಮಂಡ್ಯ, ಸೆ.29: ಕರ್ನಾಟಕ ಬಂದ್ ಕರೆಯ ಹಿನ್ನೆಲೆಯಲ್ಲಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ರೈಲ್ವೆ ನಿಲ್ದಾಣದ ಬಳಿ ರೈಲು ತಡೆಗೆ ಯತ್ನಿಸಿದ ರೈತರನ್ನು ಪೊಲೀಸರು ಬಂಧಿಸಿದರು.
ಮುನ್ನೆಚ್ಚರಿಕೆಯಾಗಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಬೇಧಿಸಿ ಒಳನುಗ್ಗಲು ರೈತರು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಮಧ್ಯೆ ಕೆಲವು ಕೆಲವು ರೈತರು ಬ್ಯಾರಿಕೇಡ್ ದಾಟಿಕೊಂಡು ಹೋಗಿ ರೈಲ್ವೆ ಹಳಿ ಮೇಲೆ ಧರಣಿ ಕುಳಿತರು. ರೈಲ್ವೆ ಹಳಿಗಳ ಮೇಲೆ ಓಡುತ್ತಿದ್ದ ರೈತರನ್ನು ಬೆನ್ನಟ್ಟಿ ಹಿಡಿದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.
ಮದ್ದೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ:
ಮದ್ದೂರು ಪಟ್ಟಣದಲ್ಲೂ ಬಂದ್ ಯಶಸ್ವಿಯಾಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತಸಂಘ, ಇತರೆ ಸಂಘಟನೆಗಳ ನೂರಾರು ಕಾರ್ಯಕರ್ತರು ನಿಷೇದಾಜ್ಞೆ ನಡುವೆಯೂ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರವಾಸಿಮಂದಿರ ವೃತ್ತದಲ್ಲಿ ವಾಹನ ಸಂಚಾರ ತಡೆದರು.