ರಾಜಕೀಯ ದೇಷಕ್ಕೆ ವರ್ಗಾವಣೆ ಆರೋಪ; ಕೃಷಿ ಸಚಿವರ ವಿರುದ್ಧ ಡೆತ್ ನೋಟ್ ಬರೆದು ಕೆಎಸ್ಸಾರ್ಟಿಸಿ ಕಂಡಕ್ಟರ್ ಆತ್ಮಹತ್ಯೆಗೆ ಯತ್ನ
ನಾಗಮಂಗಲ, ಜು.5: ‘ಕೃಷಿ ಸಚಿವ ಚೆಲುವರಾ ಯಸ್ವಾಮಿಯವರ ರಾಜಕೀಯ ದ್ವೇಷಕ್ಕೆ ನನಗೆ ವರ್ಗಾವಣೆ ಕೊಡಲಾಗುತ್ತಿದೆ’ ಎಂದು ಆರೋಪಿಸಿ ಕೆಎಸ್ಸಾರ್ಟಿಸಿ ನೌಕರನೋರ್ವ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ನಾಗಮಂಗಲ ತಾಲೂಕಿನ ಹಂದೇನಹ ಳ್ಳಿಯ ಎಚ್.ಆರ್.ಜಗದೀಶ್ ವಿಷ ಸೇವಿಸಿರುವ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಎಂದು ಗುರುತಿಸಲಾಗಿದೆ.
ಈ ಹಿಂದೆ ಇಲ್ಲಿನ ಕರ್ತವ್ಯದಿಂದ ವರ್ಗಾವಣೆ ಪತ್ರ ಪಡೆದುಕೊಳ್ಳಿ ಎಂದು ಹೇಳಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ನೌಕರ, ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ಫೋನ್ ಮಾಡಿ ಪ್ರಶ್ನಿಸಿದ್ದು, ‘ಸಚಿವ ಚೆಲುವರಾಯಸ್ವಾಮಿಯವರ ಆದೇಶದಂತೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ’ ಎಂದು ನೌಕರ ತನ್ನ ಡೆತ್ ನೋಟ್ ಹಾಳೆಯಲ್ಲಿ ಬರೆದಿದ್ದಾನೆ.
''ಅನುಚಿತವಾಗಿ ವರ್ತಿಸಿದ ಕಾರಣಕೆ ವರ್ಗಾವಣೆ''
''ವಾರದ ಹಿಂದಷ್ಟೇ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ಸಚಿವರಿಗೆ ದೂರು ಹೋಗಿತ್ತು. ಅದರಂತೆ ಬಸ್ ಕಂಡಕ್ಟರ್ ಜಗದೀಶ್ರ ವರ್ಗಾವಣೆಗೆ ಆದೇಶ ಆಗಿದೆ. ಆದರೆ, ಈ ವರ್ಗಾವಣೆ ಆದೇಶ ಪತ್ರ ಪಡೆಯಲು ಜಗದೀಶ್ ನಿರಾಕರಿಸಿದರು. ಜೊತೆಯಲ್ಲೆ ವಿಷದ ಬಾಟಲಿ ತಂದಿದ್ದು, ವಿಷವನ್ನು ಡಿಪೋದಲ್ಲೆ ಕುಡಿದಿದ್ದಾರೆ. ನಾವು ಎಷ್ಟೇ ಬುದ್ಧಿವಾದ ಹೇಳಿದರೂ ಅವರು ಕೇಳಲಿಲ್ಲ. ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ''
- ಮಂಜುನಾಥ್, ನಾಗಮಂಗಲ ಕೆಎಸ್ಸಾರ್ಟಿಸಿ ಬಸ್ ಡಿಪೋ ಸಹಾಯಕ ಕಾರ್ಯಾಧ್ಯಕ್ಷ