ಪ್ರಯಾಣಿಕನನ್ನು ಕಾಲಿನಿಂದ ಒದ್ದು ಕೆಳಗಿಳಿಸಿದ ಬಸ್ ಕಂಡಕ್ಟರ್!;‌ ವೈರಲ್‌ ವೀಡಿಯೊಗೆ ಸ್ಪಷ್ಟನೆ ನೀಡಿದ ಕೆಎಸ್ಸಾರ್ಟಿಸಿ

Update: 2025-02-23 20:55 IST
ಪ್ರಯಾಣಿಕನನ್ನು ಕಾಲಿನಿಂದ ಒದ್ದು ಕೆಳಗಿಳಿಸಿದ ಬಸ್ ಕಂಡಕ್ಟರ್!;‌ ವೈರಲ್‌ ವೀಡಿಯೊಗೆ ಸ್ಪಷ್ಟನೆ ನೀಡಿದ ಕೆಎಸ್ಸಾರ್ಟಿಸಿ

Screengrab:X

  • whatsapp icon

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಕೆಎಸ್ಸಾರ್ಟಿಸಿ ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗಿಳಿಸಿರುವ ವೀಡಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವೀಡಿಯೊ ಕುರಿತು ಕೆಎಸ್ಸಾರ್ಟಿಸಿ ಸ್ಪಷ್ಟನೆ ನೀಡಿದೆ.

ವೀಡಿಯೊ ಜತೆಗೆ ಪ್ರಕಟನೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೆಎಸ್ಸಾರ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸದರಿ ವೀಡಿಯೊ ತುಣುಕು ಎರಡೂವರೆ ವರುಷಗಳ ಹಿಂದಿನದಾಗಿದ್ದು, ಈ ಘಟನೆಯು 2022ರ ಸೆ.7ರಂದು ವಾಹನ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ 159/160ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಎಂಬವರು. ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮಧ್ಯಪಾನ ಮಾಡಿದ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿದ್ದರು.

ಜತೆಗೆ ಅವರಿಗೆ ಹೊಡೆದು ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಸಂಸ್ಥೆಯು ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅಮಾನತ್ತು ಶಿಕ್ಷೆಯನ್ನು ಸಹ ವಿಧಿಸಲಾಗಿರುತ್ತದೆ. ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಇತರೆ ಸಿಬ್ಬಂದಿಗಳಿಗೆ ಪ್ರಯಾಣಿಕರೊಡನೆ ಸೌಹಾರ್ದದಿಂದ ವರ್ತಿಸುವಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News