'ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್' ಪ್ರಶಸ್ತಿಗೆ KSRTC ಆಯ್ಕೆ

Update: 2023-08-09 12:06 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.9: ಕೆಎಸ್ಸಾರ್ಟಿಸಿಯು 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ "Asia's Best Brand Employer Award" ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ.

ಮಂಗಳವಾರ 14ನೇ ಆವೃತ್ತಿಯ 18ನೇ ಉದ್ಯೋಗದಾತ ಬ್ರಾಂಡಿಂಗ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ನಿಗಮವು ಈ ಪ್ರಶಸ್ತಿಗೆ ಆಯ್ಕೆಯಾಗಿ ರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆ. 17ರಂದು ಸಿಂಗಾಪೂರ್ ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.‌

ಕಾಂಗ್ರೆಸ್‌ ಹರ್ಷ

'2023ನೇ ಸಾಲಿನ “ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್”‌ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ. ಬಿಜೆಪಿ ಅವಧಿಯಲ್ಲಿ ನಷ್ಟದ ಹಾದಿಯಲ್ಲಿದ್ದ KSRTC ಗೆ ನಮ್ಮ ಸರ್ಕಾರ ಶಕ್ತಿ ಯೋಜನೆಯ ಮೂಲಕ ಚೈತನ್ಯ ತುಂಬಿದೆ. ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗೆ ಹಲವು ರಾಷ್ಟ್ರೀಯ ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು, ಈಗ ಮತ್ತೊಮ್ಮೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸಾರಥ್ಯದಲ್ಲಿ ಸಾರಿಗೆ ಇಲಾಖೆ ತನ್ನ ವೈಭವದ ದಿನಗಳನ್ನು ಮರಳಿ ಪಡೆಯುತ್ತಿದೆ.'

'ಹಳೆಯ ಬಸ್ಸುಗಳ ನವೀಕರಣ, ಹೊಸ ಬಸ್ ಗಳ ಖರೀದಿ, 13 ಸಾವಿರ ಸಿಬ್ಬಂದಿ ನೇಮಕದಂತಹ ನಿರ್ಧಾರಗಳಿಂದ ಮುಂದಿನ ದಿನಗಳಲ್ಲಿ ರಾಜ್ಯದ ಸಾರಿಗೆ ಇಲಾಖೆ ದೇಶಕ್ಕೆ ಮಾದರಿಯಾಗಿ ಹೊರಹೋಮ್ಮವುದು ನಿಶ್ಚಿತ.' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News