ಭೂ ಒಡೆತನ ಯೋಜನೆ | ಮಹಿಳಾ ಕೃಷಿ ಕಾರ್ಮಿಕರಿಗೆ ಶೇ.50 ರಷ್ಟು ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ಬಾನ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಗಮಗಳ ಮೂಲಕ "ಭೂ ಒಡೆತನ ಯೋಜನೆ" ಯಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ವಾನ ಮಾಡಲಾಗಿದೆ.
ಬೇಕಾದ ದಾಖಲೆಗಳು ಯಾವುವು?
1 . ಪರಿಶಿಷ್ಟ ಜಾತಿ/ಪಂಗಡದವರಾಗಿದ್ದು, ಜಾತಿ ಪ್ರಮಾಣಪತ್ರ ಹೊಂದಿರಬೇಕು.
2. ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ ಹೊಂದಿರಬೇಕು.
3. ಆಧಾಯ ಪ್ರಮಾಣ ಪತ್ರ.(ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ)
4. ವಯೋಮಿತಿ ಕನಿಷ್ಠ 21 ಹಾಗೂ ಗರಿಷ್ಮ 50 ವರ್ಷ
5. ಕುಟುಂಬದ ಪಡಿತರ ಚೀಟಿ
6. ಬ್ಯಾಂಕ್ ಪಾಸ್ ಬುಕ್ ಪ್ರತಿ
7. ಆಧಾರ್ ಕಾರ್ಡ್ ಪ್ರತಿ
ಆಸಕ್ತ ಅರ್ಹ ಅರ್ಜಿದಾರರು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಸೇವಾ ಸಿಂಧು: https://sevasindhu.karnataka.gov.in/Sevasindhu/Kannada ವೆಬ್ ಸೈಟ್ ಗೆ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬವುದು ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ, ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
ನವೆಂಬರ್ 29 ಕೊನೆಯ ದಿನಾಂಕ:
ಈಗಾಗಲೇ ಇಲಾಖೆಯಿಂದ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು 2023ರ ನವೆಂಬರ್ 29 ರಂದು ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.