ಬಿ.ಎಲ್. ಸಂತೋಷ್ ನೇತೃತ್ವದ ಸಭೆಗೆ ಬಿಜೆಪಿ ಪ್ರಮುಖ ನಾಯಕರೇ ಗೈರು..!

Update: 2023-08-31 21:31 IST
ಬಿ.ಎಲ್. ಸಂತೋಷ್ ನೇತೃತ್ವದ ಸಭೆಗೆ ಬಿಜೆಪಿ ಪ್ರಮುಖ ನಾಯಕರೇ ಗೈರು..!

Photo - Twitter@BJP4Karnataka

  • whatsapp icon

ಬೆಂಗಳೂರು, ಆ. 31: ಮುಂಬರಲಿರುವ ಲೋಕಸಭೆ ಚುನಾವಣೆ ಅಂಗವಾನಿ ಮತದಾರರ ಚೇತನ ‘ಮತದಾರರ ಚೇತನ ಮಹಾಭಿಯಾನ’ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಗೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಹಿತ ಹಲವು ಮುಖಂಡರು ಗೈರು ಹಾಜರಾಗಿದ್ದಾರೆ.

ಗುರುವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ‘ಮತದಾರರ ಚೇತನ ಅಭಿಯಾನದ ಅಂಗವಾಗಿ ಸಂಸದರು, ಶಾಸಕರು, ಸೋತ ಅಭ್ಯರ್ಥಿಗಳು, ಪದಾಧಿಕಾರಿಗಳ ಸಭೆ ನಡೆಸಲಾಯಿತು. ಆದರೆ, ಈ ಬಿಎಸ್‍ವೈ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್, ಶಂಕರ್ ಪಾಟೀಲ್ ಮುನೇನಕೊಪ್ಪ ಸೇರಿದಂತೆ ಹಲವು ಮುಖಂಡರು ಗೈರಾಗಿದ್ದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ವಿಮಾನ ಆಗಮಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲೇ ಇದ್ದರು. ಈ ಮಧ್ಯೆ ಆಪರೇಷನ್ ಹಸ್ತದ ವದಂತಿ ಹಿನ್ನೆಲೆಯಲ್ಲಿ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರೂ ಸಭೆಯಿಂದ ದೂರ ಉಳಿದಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News