ʼನಮ್ಮ ಮೆಟ್ರೋʼದಲ್ಲಿ ಪ್ರಯಾಣ ಬೆಳೆಸಿದ ಸಚಿವ ಪ್ರಿಯಾಂಕ್‌ ಖರ್ಗೆ

Update: 2023-10-19 17:52 IST
ʼನಮ್ಮ ಮೆಟ್ರೋʼದಲ್ಲಿ ಪ್ರಯಾಣ ಬೆಳೆಸಿದ ಸಚಿವ ಪ್ರಿಯಾಂಕ್‌ ಖರ್ಗೆ
  • whatsapp icon

ಬೆಂಗಳೂರು: ನಗರದ ವೈಟ್‌ಫೀಲ್ಡ್‌ ಬಳಿ ಇಂದು ನಡೆದ ಅನ್‌ಫೋಲ್ಡ್‌ ವೆಬ್ 23 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ವಿಧಾನಸೌಧಕ್ಕೆ ಹಿಂದಿರುಗಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರು ಇಂದು ಮೆಟ್ರೊ ಬಳಸಿದರು.

ವಿಧಾನಸೌಧ ಡಾ.ಬಿ.ಆರ್.ಆಂಬೇಡ್ಕರ್‌ ಮೆಟ್ರೋ ನಿಲ್ದಾಣ ಹಾಗೂ ವೈಟ್‌ಫೀಲ್ಡ್‌ ಬಳಿಯ ನೆಲ್ಲೂರುಹಳ್ಳಿ ಮೆಟ್ರೋ ನಿಲ್ದಾಣದ ನಡುವೆ ಸಚಿವರು ಮೆಟ್ರೋ ಮೂಲಕ ಸಂಚಾರ ಮಾಡಿದರು.

ನಿನ್ನೆ( ಬುಧವಾರ ) ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ವಿಧಾನಸೌಧದಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗೆ ಮೆಟ್ರೋ ಮೂಲಕ ಸಂಚಾರ ಮಾಡಿ, ಸಂತಸ ವ್ಯಕ್ತಪಡಿಸಿದ್ದರು. 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News