ದಾವಣಗೆರೆ | ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಸಂಸದ ಸಿದ್ದೇಶ್ವರ ಯಶಸ್ವಿ
ದಾವಣಗೆರೆ: ಎರಡು ದಶಕಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ ಸಂಸದರಾಗಿದ್ದ ಸಂಸದ ಸಿದ್ದೇಶ್ವರ ಅವರ ಕುಟುಂಬಕ್ಕೆ ಈ ಬಾರಿ ಬಿಜೆಪಿ ಟಿಕೆಟ್ ನೀಡದೆ. ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಅವರಿಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದಾರೆ.
ಜಿಲ್ಲೆಯಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ವಿರುದ್ದ ಬಿಜೆಪಿಯಲ್ಲಿ ಬಂಡಾಯಗಳು ಕಾಣಿಸಿಕೊಂಡಿದ್ದವು. ಮಾಜಿ ಸಚಿವ ರೇಣುಕಾಚಾರ್ಯ ಅವರು ಮಾಜಿ ಶಾಸಕ ಗುರುಸಿದ್ದನಗೌಡ ಅವರ ಮಗ ಡಾ.ರವಿಕುಮಾರ ಅವರಿಗೆ ನೀಡುವಂತೆ ಒತ್ತಾಯ ಮಾಡಿದ್ದರು.
ಅಲ್ಲದೇ ಎಸ್ ಎ.ರವೀಂದ್ರನಾಥ, ಶಿವಯೋಗಿ ಸ್ವಾಮಿ. ಮಾಜಿ ಶಾಸಕ ಗುರುಸಿದ್ದನಗೌಡ ಸೇರಿದಂತೆ ಅನೇಕ ಮುಖಂಡರು, ಸಿದ್ದೇಶ್ವರ ಅವರಿಗೆ ಈ ಬಾರಿ ಟಿಕೆಟ್ ನೀಡದಂತೆ ನಿಯೋಗ ತೆರಳಿ ವರಿಷ್ಠರು ಮನವಿ ನೀಡಿದ್ದರು. ಸಂಸದ ಸಿದ್ದೇಶ್ವರ ತಮ್ಮ ವಿರುದ್ದ ಬಂಡಾಯವಿದ್ದರೂ, ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಡಾಯ ತಣಿಸುವುದೇ ಬಿಜೆಪಿಗೆ ಸವಾಲು :
ಜಿಲ್ಲೆಯಲ್ಲಿ ಸಂಸದ ಸಿದ್ದೇಶ್ವರ ಅವರು ಸ್ವಪಕ್ಷದವರಿಂದಲೇ ಬಂಡಾಯ ಎದುರಿಸಿದ್ದರು. ಅವರಿಗೆ ಟಿಕೆಟ್ ನೀಡಿದಂತೆ ಒತ್ತಡವಿತ್ತು. ಅದರೆ ಈಗ ಅವರ ಪತ್ನಿಗೆ ಹೈಕಮಾಂಡ್ ಮಣೆ ಹಾಕಿದೆ. ಅದರೆ ಬಂಡಾಯ ಮಾತ್ರ ಶಮನವಾಗಿಲ್ಲ. ಇದನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದೇ ಬಿಜೆಪಿಗೆ ಸವಾಲಾಗಿದೆ.
ಜಿಲ್ಲೆಯಲ್ಲಿ ಡಾ.ರವಿಕುಮಾರ್, ಕೊಟ್ರೇಶ್ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಟಿಕೆಟ್ ಅಕಾಂಕ್ಷಿಗಳಾಗಿದ್ದರು. ಈ ನಿಟ್ಟಿನಲ್ಲಿ ಆಕಾಂಕ್ಷಿಗಳು ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು, ಅದರೆ, ಬಿಜೆಪಿ ಹೈಕಮಾಂಡ್ ಮತ್ತೆ ಸಿದ್ದೇಶ್ವರ ಅವರ ಬದಲು ಕುಟುಂಬಕ್ಕೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ.