ಸಿಎಂ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಪ್ರಕರಣ : ಇಬ್ಬರು ಕಾನ್ಸ್‌ಟೇಬಲ್ ಅಮಾನತು
Update: 2025-04-29 20:41 IST
ಬೆಂಗಳೂರು : ಇಲ್ಲಿನ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿ, ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಮುತ್ತಿಗೆ ಹಾಕಿದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್‍ಗಳನ್ನು ಅಮಾನತು ಮಾಡಲಾಗಿದೆ.
ಖಡೇಬಜಾರ್ ಠಾಣೆಯ ಕಾನ್ಸ್ ಟೇಬಲ್ ಬಿ.ಎ.ನೌಕುಡಿ, ಕ್ಯಾಂಪ್ ಠಾಣೆಯ ಕಾನ್ಸ್ ಟೇಬಲ್ ಮಲ್ಲಪ್ಪ ಹಡಗಿನಾಳ ಅನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತೆಯರು ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕೆ ಪೊಲೀಸರ ಕರ್ತವ್ಯ ಲೋಪಕ್ಕೆ ಮುಖ್ಯಮಂತ್ರಿ ಗರಂ ಆಗಿದ್ದರು.