ನಮ್ಮ ಮನೆ ಸುಟ್ಟಿದ್ದು ರಝಾಕಾರರು, ಮುಸ್ಲಿಮರಲ್ಲ : ಯುಪಿ ಸಿಎಂ ಯೋಗಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

Update: 2024-11-13 19:24 IST
ನಮ್ಮ ಮನೆ ಸುಟ್ಟಿದ್ದು ರಝಾಕಾರರು, ಮುಸ್ಲಿಮರಲ್ಲ : ಯುಪಿ ಸಿಎಂ ಯೋಗಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಪ್ರಿಯಾಂಕ್‌ ಖರ್ಗೆ/ ಯೋಗಿ ಆದಿತ್ಯನಾಥ್‌(PTI)

  • whatsapp icon

ಬೆಂಗಳೂರು : ತಮ್ಮ ಮನೆಯನ್ನು ಸುಟ್ಟಿದ್ದು ರಝಾಕಾರರು, ಮುಸ್ಲಿಂ ಸಮುದಾಯವಲ್ಲ. ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತದೆಂದು ಇಡೀ ಸಮುದಾಯವನ್ನು ದೂರಲು ಆಗುವುದಿಲ್ಲ. ಇದೆಲ್ಲ ಈಗ ಅಪ್ರಸ್ತುತ ಚರ್ಚೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‍ಗೆ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದಲ್ಲಿ ‘ರಝಾಕಾರರಿಂದ ತಾಯಿ, ಸಹೋದರಿ ಮೃತಪಟ್ಟಿದ್ದರೂ ಮಲ್ಲಿಕಾರ್ಜುನ ಖರ್ಗೆ ಮೌನ’ ಎಂಬ ಯೋಗಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಯೋಗಿ ಆದಿತ್ಯನಾಥ್‍ಗೆ, ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸ ಗೊತ್ತಿಲ್ಲ. ನಮ್ಮ ಮನೆ ಸುಟ್ಟಿದ್ದು ರಝಾಕಾರರು. ಮುಸ್ಲಿಂ ಸಮುದಾಯ ಅಲ್ಲ. ಇಷ್ಟೆಲ್ಲ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಮೊದಲು ಬಿಜೆಪಿ, ಆರೆಸ್ಸೆಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ" ಎಂದರು.

ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಅಂತ ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರುವುದು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News