ಬೈಕ್ ಗೆ ಪಿಕಪ್ ಢಿಕ್ಕಿ: ದಂಪತಿ ಮೃತ್ಯು

Update: 2023-09-20 16:56 GMT

ಕಲಬುರಗಿ: ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ ಟಿ ಕ್ರಾಸ್ ಬಳಿ ಪಿಕಪ್‌ ವಾಹನವೊಂದು ಬೈಕ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಕುರಕುಂಟಾ ಗ್ರಾಮದ ಕಾಲೋನಿ ನಿವಾಸಿಗಳಾಗಿರುವ ಶೇಖ್ ಸಲೀಂ ಹಾಗೂ ಅವರ ಪತ್ನಿ ರೈಜಾ ಬೇಗಂ ಮೃತಪಟ್ಟವರು ಎಂದು ಗುರುತಿಸಲಾಗಿದೆ. 

ದಂಪತಿ ಬೈಕಿನಲ್ಲಿ ಕುರಕುಂಟಾ ಗ್ರಾಮದಿಂದ ಮಂಗಳವಾರ ಸೇಡಂಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.   

ಬೈಕ್ ಸವಾರ ಶೇಕ್ ಸಲಿಂ ಅವರ ತಲೆಗೆ ಹಾಗೂ ಅವರ ಪತ್ನಿ ರೈಜಾ ಬೇಗಂ ಅವರ ಎದೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದ್ದರೂ ಮಾರ್ಗ ಮಧ್ಯದಲ್ಲಿ ಇಬ್ಬರೂ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News