ಜಾಗತಿಕ ಹೂಡಿಕೆದಾರರ ಸಮಾವೇಶ | ಕರ್ನಾಟಕಕ್ಕೆ ಕೊಡುಗೆ ನೀಡಿದ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಿದ ಪಿಯೂಷ್ ಗೋಯಲ್

Update: 2025-02-12 21:56 IST
ಜಾಗತಿಕ ಹೂಡಿಕೆದಾರರ ಸಮಾವೇಶ | ಕರ್ನಾಟಕಕ್ಕೆ ಕೊಡುಗೆ ನೀಡಿದ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಿದ ಪಿಯೂಷ್ ಗೋಯಲ್
  • whatsapp icon

ಬೆಂಗಳೂರು : ಕರ್ನಾಟಕದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಅಭಿವೃದ್ಧಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬುಧವಾರ ವಿವಿಧ ಪ್ರಶಸ್ತಿಗಳನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿತರಿಸಿದರು.

ಹಾನ್ ಹೈ ಪ್ರೆಸಿಶನ್ ಇಂಡಸ್ಟ್ರಿ ಕೊ., ಲಿಮಿಟೆಡ್. (ಫಾಕ್ಸ್‌ ಕಾನ್) ಸಂಸ್ಥೆಗೆ ಹೂಡಿಕೆ ಟೈಟಾನ್ ಪ್ರಶಸ್ತಿ, ದಿವಂಗತ ಶ್ರೀ ವಿಕ್ರಮ್ ಕಿರ್ಲೋಸ್ಕರ್ (ಮರಣೋತ್ತರ ಪ್ರಶಸ್ತಿ ಪುರಸ್ಕೃತ) ಅವರಿಗೆ ಇಂಡಸ್ಟ್ರಿಯಲ್ ಲೆಗಸಿ ಪ್ರಶಸ್ತಿ, ಸ್ಯಾಮ್‍ಸಂಗ್ ಆರ್ ಅಂಡ್ ಡಿ ಸಂಸ್ಥೆಗೆ ಇನ್ನೋವೇಶನ್ ಎಕ್ಸಲೆನ್ಸ್ ಪ್ರಶಸ್ತಿ, ಶಾಹಿ ಎಕ್ಸ್‌ ಪೋಟ್ರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಡೈವರ್ಸಿಟಿ ಲೀಡರ್‌ ಶಿಪ್ ಎಕ್ಸಲೆನ್ಸ್ ಪ್ರಶಸ್ತಿ, ಏಕ್ಯೂಸ್ ಸಂಸ್ಥೆಗೆ ಇಕೋಸಿಸ್ಟಮ್ ಎನೇಬ್ಲರ್ ಪ್ರಶಸ್ತಿ, ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್ ಇಂಡಿಯಾ ಸಂಸ್ಥೆಗೆ ಕರ್ನಾಟಕದ ಆರ್ ಅಂಡ್ ಡಿ ಪರಿಸರ ವ್ಯವಸ್ಥೆ ಪ್ರಶಸ್ತಿಗಳನ್ನು ಸಮಾವೇಶದಲ್ಲಿ ನೀಡಿ ಗೌರವಿಸಲಾಯಿತು.

ಜೆಎಸ್‍ಡಬ್ಲ್ಯೂ ಗ್ರೂಪ್ ಸಂಸ್ಥೆಗೆ ದಶಕದ ಹೂಡಿಕೆದಾರ ಪ್ರಶಸ್ತಿ, ಟಾಟಾ ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಉದ್ಯೋಗ ಸೃಷ್ಟಿಯ ಚಾಂಪಿಯನ್ಸ್ ಪ್ರಶಸ್ತಿ, ಇನ್ಫೋಸಿಸ್ ಸಂಸ್ಥೆಗೆ ಉದ್ಯೋಗ ಸೃಷ್ಟಿಯ ಚಾಂಪಿಯನ್ಸ್ ಪ್ರಶಸ್ತಿ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಬಯೋಕಾನ್ ಗ್ರೂಪ್, ಆರ್‌ ಟಿಎಕ್ಸ್ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಗಳಿಗೆ ಸನ್‍ರೈಸ್ ಸೆಕ್ಟರ್ ಪ್ರವರ್ತಕ ಪ್ರಶಸ್ತಿಗಳು ಮತ್ತು ರಿನ್ಯೂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ನವೀಕರಿಸಬಹುದಾದ ಇಂಧನ ಶ್ರೇಷ್ಠತೆ ಪ್ರಶಸ್ತಿಯನ್ನು ಸಮಾವೇಶದಲ್ಲಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News