ಅನುತ್ತೀರ್ಣರಾದ ಶೇ.92ರಷ್ಟು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಗೆ ನೋಂದಣಿ

Update: 2025-04-16 20:16 IST
ಅನುತ್ತೀರ್ಣರಾದ ಶೇ.92ರಷ್ಟು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಗೆ ನೋಂದಣಿ

ಸಾಂದರ್ಭಿಕ ಚಿತ್ರ | PC: pexels

  • whatsapp icon

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ 1,69,353 ವಿದ್ಯಾರ್ಥಿಗಳಲ್ಲಿ ಶೇ.92.4 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಎ.24 ರಿಂದ ಮೇ 8ರ ನಡುವೆ ನಡೆಯಲಿರುವ ದ್ವಿತೀಯ ಪರೀಕ್ಷೆ-2 ನಡೆಯಲಿದೆ. ಈ ಪರೀಕ್ಷೆಯ ಫಲಿತಾಂಶಗಳನ್ನು ಸಿಇಟಿ ಫಲಿತಾಂಶದ ಮುನ್ನ ಪ್ರಕಟಿಸಲಾಗುವುದು. ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಿಇಟಿ ಅಧಿಕಾರಿಗಳು ಕಾಯುವುದಾಗಿ ತಿಳಿಸಿದ್ದು, ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ರ್ಯಾಂಕ್ ಪ್ರಕಟಿಸಲಾಗುವುದು ಎಂದರು.

ಶೇ.92.4 ಅನುತ್ತೀರ್ಣ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ-2ಕ್ಕೆ ದಾಖಲಾಗಿರುವುದು ಒಳ್ಳೆಯ ಬೆಳವಣಿಗೆ. ಪರೀಕ್ಷೆಗೆ ದಾಖಲಾದವರಿಗೆ ಪರಿಹಾರ ಭೋಧನೆ ತರಗತಿಗಳನ್ನು ನಡೆಸಲಾಗುತ್ತಿದೆ, ಹಾಜರಾತಿಯು ಶೇ.95ರಷ್ಟಿದ್ದು, ಎರಡನೇ ಮತ್ತು ಮೂರನೇ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಉತ್ತಮವಾಗಿ ಸಿದ್ಧಪಡಿಸಲು ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದಲ್ಲದೆ, ಜೂ.9 ರಿಂದ ಜೂ.20ರ ವರೆಗೆ ಮೂರನೇ ಪರೀಕ್ಷೆಯನ್ನು ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News