ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಪ್ರಾರಂಭ: ಗೃಹ ಸಚಿವ ಜಿ.ಪರಮೇಶ್ವರ್

Update: 2023-12-14 15:18 GMT

ಬೆಳಗಾವಿ: ಅಗ್ನಿ ದುರಂತಗಳು ಸಂಭವಿಸಿದಾಗ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ವಾಹನಗಳ ಖರೀದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ100 ಕೋಟಿ ರೂ. ಅನುದಾನ ನೀಡಿದ್ದಾರೆ. ಖರೀದಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ನಮಗೆ ಈ ವಾಹನಗಳಲ್ಲಿ ಲಭ್ಯವಾದರೆ, ಹಳ್ಳಿ ಮತ್ತು ಹೋಬಳಿ ಒಳಗೊಂಡಂತೆ ಎಲ್ಲ ಕಡೆಗಳಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದರು.

15 ವರ್ಷ ಮೀರಿದ ವಾಹನಗಳನ್ನು ಮರು ನೋಂದಣಿ ಮಾಡಬಾರದು ಎಂದು ಕೇಂದ್ರ ಸರಕಾರ ಈಗಿರುವ ಕಾನೂನು ತಿದ್ದುಪಡಿ ಮಾಡಿದೆ. ನಮ್ಮಲ್ಲಿರುವ 443 ವಾಹನಗಳು ಈ ನಿಯಮದ ವ್ಯಾಪ್ತಿಗೆ ಬರುತ್ತವೆ. ಆದರೆ, ವಾಹನಗಳು ಹೆಚ್ಚು ಸಂಚರಿಸಿಲ್ಲ ಹಾಗೂ ಬಳಕೆಗೆ ಯೋಗ್ಯವಾಗಿವೆ. ಹೀಗಾಗಿ ಅನುಮತಿ ಕೋರಿ ಕೇಂದ್ರ ಗೃಹ ಇಲಾಖೆ ಅಕ್ಟೋಬರ್ 6ರಂದು ಪತ್ರ ಬರೆಯಲಾಗಿದೆ. ನಮಗೆ ಈತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News