ವಿಧಾನಸಭೆ: 13,823.47 ಕೋಟಿ ರೂ.ಗಳ ಪೂರಕ ಅಂದಾಜು ಮಂಡನೆ

ಬೆಂಗಳೂರು : 2024-25ನೇ ಸಾಲಿನ ಮೂರನೆ ಮತ್ತು ಅಂತಿಮ ಕಂತು 13,823.47 ಕೋಟಿ ರೂ.ಗಳ ಪೂರಕ ಅಂದಾಜು ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬುಧವಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.
13,823.47 ಕೋಟಿ ರೂ.ಗಳಲ್ಲಿ 71.98 ಕೋಟಿ ರೂ.ಗಳು ಪ್ರಭುತ್ವ ವೆಚ್ಚ ಮತ್ತು 13,751.49 ಕೋಟಿ ರೂ.ಗಳು ಪುರಸ್ಕೃತ ವೆಚ್ಚ ಸೇರಿರುತ್ತದೆ. ಇದರಲ್ಲಿ ಮೀಸಲು ನಿಧಿಯಿಂದ ಭರಿಸಲಾಗುವ 1512.21 ಕೋಟಿ ರೂ.ಗಳು ಸಹ ಪುರಸ್ಕೃತವಾಗಬೇಕಿದ್ದು, ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 12,311.26 ಕೋಟಿ ರೂ.ಗಳು, 1187.73 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಆದುದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 11123.53 ಕೋಟಿ ರೂ.ಗಳಾಗಿರುತ್ತದೆ.
ಈ ಮೊತ್ತವನ್ನು ರಾಜ್ಯದ ರಾಜಸ್ವ ಸ್ವೀಕೃತಿಗಳಿಂದ ಮತ್ತು ಅಗತ್ಯವಿದ್ದಲ್ಲಿ, ವೆಚ್ಚದ ಮರು ಪ್ರಾಧಾನ್ಯತೆ ಮತ್ತು ಸಂಭವನೀಯ ಉಳಿತಾಯ ಹಾಗೂ ಸಾಲದ ಮೂಲಕ ಭರಿಸಲಾಗುತ್ತದೆ. ಶಾಸಕಾಂಗದಿಂದ ಅನುಮೋದನೆಗೊಂಡಿರುವ ಈ ಪೂರಕ ಅಂದಾಜು(ಮೂರನೇ ಮತ್ತು ಅಂತಿಮ ಕಂತು)ಗಳಲ್ಲಿರುವ ಮೊತ್ತದ ವಾಸ್ತವಿಕ ಬಿಡುಗಡೆಯನ್ನು ರಾಜ್ಯ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಹಾಗೂ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002 ನಿಬಂಧನೆಗಳಿಗೆ ಅನುಗುಣವಾಗಿ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ರಾಜಸ್ವ ಖಾತೆಗೆ 475.98 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 15 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಖಾತೆಗೆ 257.20 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 10.69 ಕೋಟಿ ರೂ., ಆರ್ಥಿಕ ಇಲಾಖೆಗೆ ರಾಜಸ್ವ ಖಾತೆಗೆ 27.55 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 766.85 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಗೆ ರಾಜಸ್ವ ಖಾತೆಗೆ 77.71 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 6.01 ಕೋಟಿ ರೂ.ಮಂಜೂರು ಮಾಡುವಂತೆ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ರಾಜಸ್ವ ಖಾತೆಗೆ 637 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಖಾತೆಗೆ 52.40 ಕೋಟಿ ರೂ., ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಗೆ ರಾಜಸ್ವ ಖಾತೆಗೆ 71.71 ಕೋಟಿ ರೂ., ಸಹಕಾರ ಇಲಾಖೆಗೆ ರಾಜಸ್ವ ಖಾತೆಗೆ 10 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಖಾತೆಗೆ 447.79 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 113.99 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಜಸ್ವ ಖಾತೆಗೆ 57.84 ಕೋಟಿ ರೂ.ಮಂಜೂರು ಮಾಡುವಂತೆ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.
ವಾರ್ತಾ, ಪ್ರವಾಸೋದ್ಯಮ ಮತ್ತು ಯುವ ಜನ ಸೇವೆಗಳು ಇಲಾಖೆಗೆ ರಾಜಸ್ವ ಖಾತೆಗೆ 157.21 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 36.01 ಲಕ್ಷ ರೂ., ಕಂದಾಯ ಇಲಾಖೆಗೆ ರಾಜಸ್ವ ಖಾತೆಗೆ 282.84 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 96 ಕೋಟಿ ರೂ., ಶಿಕ್ಷಣ ಇಲಾಖೆಗೆ ರಾಜಸ್ವ ಖಾತೆಗೆ 29.12 ಕೋಟಿ ರೂ., ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ರಾಜಸ್ವ ಖಾತೆಗೆ 37.05 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 130.13 ಕೋಟಿ ರೂ., ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ರಾಜಸ್ವ ಖಾತೆಗೆ 633.26 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 1044.18 ಕೋಟಿ ರೂ. ಮಂಜೂರು ಮಾಡುವಂತೆ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.
ಲೋಕೋಪಯೋಗಿ ಇಲಾಖೆಗೆ ಬಂಡವಾಳ ಖಾತೆಗೆ 1000 ಕೋಟಿ ರೂ., ನೀರಾವರಿ ಇಲಾಖೆಗೆ ಬಂಡವಾಳ ಖಾತೆಗೆ 2503 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರಾಜಸ್ವ ಖಾತೆಗೆ 100.11 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 385.21 ಕೋಟಿ ರೂ., ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗೆ ರಾಜಸ್ವ ಖಾತೆಗೆ 354.71 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 1 ಲಕ್ಷ ರೂ., ಇಂಧನ ಇಲಾಖೆಗೆ ಬಂಡವಾಳ ಖಾತೆಗೆ 4028.12 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜಸ್ವ ಖಾತೆಗೆ 10.6 ಕೋಟಿ ರೂ., ಕಾನೂನು ಇಲಾಖೆಗೆ ರಾಜಸ್ವ ಖಾತೆಗೆ 3.80 ಕೋಟಿ ರೂ. ಹಾಗೂ ಬಂಡವಾಳ ಖಾತೆಗೆ 36 ಲಕ್ಷ ರೂ. ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ 8.71 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಪೂರಕ ಅಂದಾಜು ಮಂಡನೆ ಮಾಡಲಾಗಿದೆ.