ಶಿವಮೊಗ್ಗ | ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ; ಮೂವರಿಗೆ ಚಾಕು ಇರಿತ

Update: 2023-11-10 05:52 GMT

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮೂವರಿಗೆ ಚಾಕು ಇರಿದಿರುವ ಘಟನೆ ಜೆಪಿ ನಗರ ಬಳಿ ಗುರುವಾರ ರಾತ್ರಿ ವರದಿಯಾಗಿದೆ.

ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್​ ಸೋನು (19) ಚಾಕು ಇರಿತದಿಂದ ಗಾಯಗೊಂಡವರು ಎಂದು ತಿಳಿದುಬಂದಿದೆ.

15 ದಿನಗಳ ಹಿಂದೆ ​ಸಮೀರ್​​​, ಫರಾಝ್​ ಮತ್ತು ಸಲ್ಲು, ಸೆಬು, ಸೋನು, ಕತ್ರು ಎಂಬವರ ಗುಂಪುಗಳ​ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.

ಇದೇ ವಿಚಾರಕ್ಕೆ ಗುರುವಾರ ಜೆಪಿ ನಗರದ ಜಂಡೆಕಟ್ಟೆ ಬಳಿ ಗ್ಯಾರವಿ ಸಂಭ್ರಮದಲ್ಲಿ ಭಾಗಿಯಾಗಿದ್ದ ಯುವಕರ 2 ಗುಂಪು, ಪರಸ್ಪರ ಗುರಾಯಿಸಿಕೊಂಡು, ಮತ್ತೆ ಮಾರಕಾಸ್ತ್ರದಿಂದ ಬಡಿದಾಡಿಕೊಂಡಿದ್ದಾರೆ. ಈ ವೇಳೆ  ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಶಿವಮೊಗ್ಗ ನಗರದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News