ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಸ.ರ. ಸುದರ್ಶನ್ ಆಯ್ಕೆ

Update: 2025-04-11 23:48 IST
ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಸ.ರ. ಸುದರ್ಶನ್ ಆಯ್ಕೆ

ಸ.ರ.ಸುದರ್ಶನ್

  • whatsapp icon

ಬೆಂಗಳೂರು: ಕಸಾಪದ ಕನ್ನಡ ಚಳವಳಿಯ ಮ.ರಾಮಮೂರ್ತಿ ದತ್ತಿ ಪ್ರಶಸ್ತಿಗೆ ಮೈಸೂರಿನ ಕನ್ನಡ ಹೋರಾಟಗಾರ ಸ.ರ.ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿದೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ರಾಜ್ಯಾದ್ಯಂತ ಕನ್ನಡ ಚಳವಳಿಗೆ ಶಕ್ತಿಯನ್ನು, ಹೋರಾಟದ ಸ್ಪೂರ್ತಿಯನ್ನು ತುಂಬಿದಂತಹ ಮ.ರಾಮಮೂರ್ತಿಯವರ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದತ್ತಿಯನ್ನು ಸ್ಥಾಪಿಸಿದ್ದು, ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗಳ ರಕ್ಷಣೆಗೆ ಹಾಗೂ ಪ್ರಗತಿಗೆ ಶ್ರಮಿಸಿ ಎಲೆ ಮರೆಯ ಕಾಯಿಗಳಂತಿರುವ ಕನ್ನಡ ಕಾರ್ಯಕರ್ತರಿಗೆ ಈ ಪ್ರಶಸ್ತಿ ನೀಡಿಗೌರವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

2025ನೆಯ ಸಾಲಿನ ಪ್ರಶಸ್ತಿಗೆ ಪಾತ್ರರಾಗಿರುವ ಮೈಸೂರಿನ ಸ.ರ.ಸುದರ್ಶನ ಗೋಕಾಕ್ ಚಳವಳಿಯ ಆರಂಭದಿಂದಲೂ ಕನ್ನಡ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು, ಕನ್ನಡವನ್ನು ಶಿಕ್ಷಣ ಮಾದ್ಯಮವಾಗಿಸಲು, ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಸದ್ಭಳಕೆ ಕುರಿತು ಹೀಗೆ ನಿರಂತರವಾಗಿ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News