ಇಂದು ಎಸ್ಸೆಸ್ಸೆಫ್ 'ಸಂವಿಧಾನ ಯಾತ್ರೆ' ಸಮಾರೋಪ: ಎ.ಪಿ. ಉಸ್ತಾದ್ ರನ್ನು 'ರಾಜ್ಯ ಅತಿಥಿ'ಯಾಗಿ ಘೋಷಿಸಿದ ಸರಕಾರ

Update: 2023-09-10 04:52 GMT

ಬೆಂಗಳೂರು, ಸೆ.10: ಬೆಂಗಳೂರಿನಲ್ಲಿಂದು ನಡೆಯುವ ಎಸ್ಸೆಸ್ಸೆಫ್ ನ 'ಸಂವಿಧಾನ ಯಾತ್ರೆ' ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು 'ರಾಜ್ಯ ಅತಿಥಿ'ಯಾಗಿ ರಾಜ್ಯ ಸರಕಾರ ಘೋಷಿಸಿದೆ.

ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎ.ಪಿ.ಉಸ್ತಾದ್ ವಿಶೇಷ ಪ್ರಕರಣದಡಿಯಲ್ಲಿ ರಾಜ್ಯ ಅತಿಥಿಗಳಾಗಿರುತ್ತಾರೆ. ಆದ್ದರಿಂದ ಅವರು ರಾಜ್ಯಕ್ಕೆ ಭೇಟಿ ನೀಡುವ ಸಮಯದಲ್ಲಿ ರಾಜ್ಯ ಅತಿಥಿ ನಿಯಮಗಳ ಪ್ರಕಾರ ಸೂಕ್ತ ವಸತಿ ಮತ್ತು ಸಾರಿಗೆಯನ್ನು ಒದಗಿಸಲು ಮತ್ತು ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಸರಕಾರದ ಅಧೀನದ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ಅವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ನ 50ನೇ ವರ್ಷಾಚರಣೆ ಪ್ರಯುಕ್ತ ಗೋಲ್ಡನ್ ಫಿಫ್ಟಿ ಮಹಾಸಮ್ಮೇಳನ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿರುವ ಕಾಶ್ಮೀರದಿಂದ ಆರಂಭವಾಗಿರುವ 'ಸಂವಿಧಾನ ಯಾತ್ರೆ' ಸಮಾರೋಪ ಸಮಾರಂಭವು ಇಂದು ಬೆಂಗಳೂರಿನ ಶ್ರೀ ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಎ.ಪಿ.ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ. ಹಲವಾರು ಉಲಮಾ-ಉಮರಾ ಮುಖಂಡರುಗಳು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News