ಎಸೆಸೆಲ್ಸಿ ಪರೀಕ್ಷೆ: 13,347 ಮಂದಿ ಗೈರು, 9 ಮಂದಿ ಡಿಬಾರ್

Update: 2024-03-27 15:28 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಗಳು ನಡೆಯುತ್ತಿದ್ದು, ಬುಧವಾರದಂದು ನಡೆದ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ 13,347 ಮಂದಿ ಗೈರಾಗಿದ್ದಾರೆ. ಪರೀಕ್ಷೆ ಬರೆಯುತ್ತಿದ್ದ 9 ಮಂದಿ ಅಭ್ಯರ್ಥಿಗಳು ಡಿಬಾರ್ ಅಗಿದ್ದಾರೆ.

ಪರೀಕ್ಷೆಗೆ 8,41,120 ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 8,27,773 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಶೇ.98.4ರಷ್ಟು ಹಾಜರಾತಿ ಪ್ರಮಾಣ ಇದೆ. ಬೆಂಗಳೂರಿನಲ್ಲಿ ಒಬ್ಬರು ಡಿಬಾರ್ ಆಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 4, ಕಲಬುರಗಿ ಜಿಲ್ಲೆಯಲ್ಲಿ 1, ರಾಯಚೂರು ಜಿಲ್ಲೆಯಲ್ಲಿ 3 ಮಂದಿ ಸೇರಿ ಒಟ್ಟು 9 ಮಂದಿ ಪರೀಕ್ಷೆಯಲ್ಲಿ ಡಿಬಾರ್ ಆಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News