ಎಸೆಸೆಲ್ಸಿ ಪರೀಕ್ಷೆ: 13,468 ವಿದ್ಯಾರ್ಥಿಗಳು ಗೈರು, ಓರ್ವ ಡಿಬಾರ್

Update: 2024-03-25 13:38 GMT
ಸಾಂದರ್ಭಿಕ ಚಿತ್ರ(PTI)

ಬೆಂಗಳೂರು: ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಸೋಮವಾರದಂದು ನಡೆದ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್,‌ ಇಂಗ್ಲಿಷ್ (ಎನ್‍ಸಿಇಆರ್‍ಟಿ) ಪರೀಕ್ಷೆಯಲ್ಲಿ 13,468 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಬ್ಬರು ಡಿಬಾರ್ ಆಗಿದ್ದಾರೆ.

ಪರೀಕ್ಷೆಗೆ 8,45,811 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. 8,32,343 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಒಬ್ಬರನ್ನು ಡಿಬಾರ್ ಮಾಡಲಾಗಿದೆ. ಶೇ.98.41ರಷ್ಟು ಹಾಜರಾತಿ ದಾಖಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 1,688 ವಿದ್ಯಾರ್ಥಿಗಳು, ರಾಯಚೂರು ಜಿಲ್ಲೆಯಲ್ಲಿ 1,515 ವಿದ್ಯಾರ್ಥಿಗಳು ಹಾಗೂ ಬೀದರ್ ಜಿಲ್ಲೆಯಲ್ಲಿ 1,030 ವಿದ್ಯಾರ್ಥಿಗಳಯ ಪರೀಕ್ಷೆಗೆ ಗೈರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News