ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ

Update: 2024-11-15 14:18 IST
ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ
  • whatsapp icon

ಬೆಂಗಳೂರು: ರಾಜ್ಯ ಸರ್ಕಾರ ಏಳು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಹುದ್ದೆ ನಿರೀಕ್ಷೆಯಲ್ಲಿದ್ದ ಸಂತನು ಸಿನ್ಹಾ ಅವರನ್ನು ಸಿಐಡಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕ ಚನ್ನಬಸವಣ್ಣ ಲಂಗೋಟಿ ಅವರಿಗೆ ರಾಜ್ಯ ಪೊಲೀಸ್ ಅಕಾಡೆಮಿಯ ನಿರ್ದೇಶಕರ ಹುದ್ದೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ನಿರ್ದೇಶಕರ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ ಎಸ್ಪಿಯಾಗಿ ಶಿವಾಂಶು ರಜಪೂತ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

 ಬಿಎಂಟಿಸಿಯ(ಭದ್ರತೆ ಮತ್ತು ಜಾಗೃತ) ನಿರ್ದೇಶಕರಾಗಿ ಅಬ್ದುಲ್ ಅಹದ್, ವಿಜಯಪುರ ಜಿಲ್ಲಾ ಎಸ್ಪಿಯಾಗಿ ಲಕ್ಷ್ಮಣ್ ನಿಂಬರಗಿ, ಯಾದಗಿರಿ ಜಿಲ್ಲಾ ಎಸ್ಪಿಯಾಗಿ ಪೃಥ್ವಿಕ್ ಶಂಕರ್ ಅವರನ್ನು ವರ್ಗಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News