ಸಂವಿಧಾನದ ಮೂಲಭೂತ ಹಕ್ಕನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ

Update: 2024-03-12 15:14 GMT

ಬೆಂಗಳೂರು, ಮಾ.12: ರಾಜ್ಯಾದ್ಯಂತ 5, 8 ಮತ್ತು 9ನೆ ತರಗತಿ ಬೋರ್ಡ್ ಪರೀಕ್ಷೆಗೆ ಮಾಡುವ ಸರಕಾರದ ಕಾನೂನು ಬಾಹಿರ ಕ್ರಮವನ್ನು ತಡೆಹಿಡಿಯುವ ಮೂಲಕ ಸರ್ವೋಚ್ಛ ನ್ಯಾಯಾಲಯವು ಸಂವಿಧಾನದ ಮೂಲಭೂತ ಹಕ್ಕಾದ 21ಎ ಮತ್ತು ಶಿಕ್ಷಣ ಹಕ್ಕು ಕಾಯಿದೆಯ ಪ್ರಕರಣ 30ನ್ನು ಎತ್ತಿ ಹಿಡಿದಿದೆ ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.

ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ದೇಶದಾದ್ಯಂತ ಯುಪಿಎ ಸರಕಾರ 2010ರಲ್ಲಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಈಗಲೂ ಜಾರಿಯಿಯಲ್ಲಿದ್ದು, ಮೌಲ್ಯ ಮಾಪನ ಮತ್ತು ಕಲಿಕಾ ಫಲಿತಾಂಶ ಕುರಿತಂತೆ ಕೇಂದ್ರ ಸರಕಾರ 2010ರಲ್ಲಿ ರೂಪಿಸಿರುವ ನಿಯಮ 23ರ ಅನ್ವಯ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿದೆ ಎಂದಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯ ಪ್ರಕರಣ 30 ಮಕ್ಕಳು 8ನೆ ತರಗತಿ ಮುಗಿಸಿವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತದೆ. ಹೀಗಿದ್ದರೂ, ಸರಕಾರ ಕಾನೂನನ್ನು ಉಲ್ಲಂಘಿಸಿ ಪರೀಕ್ಷೆ ಮಾಡಲು ಹೊರಟಾಗ ಕಾನೂನು ಹೋರಾಟ ಅನಿವಾರ್ಯವಾಗಿತ್ತು. ಈ ಕಾನೂನು ಹೋರಾಟದಲ್ಲಿ ಸರ್ವೋಚ್ಛ ನ್ಯಾಯಾಲಯವು ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿಹಿಡಿದಿದ್ದು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಮಾನ್ಯತೆ ದೊರೆತಿದೆ ಎಂದು ಹೇಳಿದ್ದಾರೆ.

ಈಗಲಾದರೂ ಸರಕಾರದ ತನ್ನ ಒಣ ಪ್ರತಿಷ್ಠೆ ಬಿಡಬೇಕು. ಮಕ್ಕಳ ಹಿತಾಸಕ್ತಿಯನ್ನು ಗೌರವಿಸಿ, ಶಾಲಾ ಹಂತದಲ್ಲಿ ನಡೆದಿರುವ ಮಕ್ಕಳ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಮಕ್ಕಳ ಫಲಿತಾಂಶ ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಕಲಿಕೆ ಅಣಿಗೊಳಿಸಿವ ಕೆಲಸಕ್ಕೆ ಮುಂದಾಗಬೇಕಿದೆ ಅವರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News