ಸಿವಿಲ್ ಸೇವೆಗಳ ಹೊಸ ನೇಮಕಾತಿ ಅಧಿಸೂಚನೆ ತಡೆಗೆ ರಾಜ್ಯ ಸರಕಾರ ಆದೇಶ
Update: 2025-04-11 21:15 IST

ಬೆಂಗಳೂರು: ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿಯಬೇಕೆಂದು ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
2024ರ ಅಕ್ಟೋಬರ್ 28ರ ನಂತರ ನೇರ ನೇಮಕಾತಿಗಾಗಿ ಹಾಗೂ ‘ಬ್ಯಾಕ್‍ಲಾಗ್ ಹುದ್ದೆ’ಗಳ ಭರ್ತಿಗಾಗಿ ಯಾವುದೇ ಹೊಸ ಅಧಿಸೂಚನೆಗಳನ್ನು ಹೊರಡಿಸಿದ್ದಲ್ಲಿ ಕೂಡಲೇ ಆಯಾ ನೇಮಕಾತಿ ಪ್ರಾಧಿಕಾರಗಳು ರದ್ದುಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.