ಕಲಬುರಗಿ: ತನ್ನ ಬದಲಿಗೆ ಬಾಡಿಗೆ ಶಿಕ್ಷಕಿಯನ್ನು ನೇಮಿಸಿಕೊಂಡಿದ್ದ ಶಿಕ್ಷಕ ಅಮಾನತು

Update: 2023-07-12 22:36 IST
ಕಲಬುರಗಿ: ತನ್ನ ಬದಲಿಗೆ ಬಾಡಿಗೆ ಶಿಕ್ಷಕಿಯನ್ನು ನೇಮಿಸಿಕೊಂಡಿದ್ದ ಶಿಕ್ಷಕ ಅಮಾನತು
  • whatsapp icon

ಕಲಬುರಗಿ: ಜಿಲ್ಲೆಯ ಚಿತಾಪುರ ತಾಲೂಕಿನ ಬಾಲಿನಾಯಕ ತಾಂಡಾದ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹೇಂದ್ರ ಕುಮಾರ್ ಅವರು ತಮ್ಮ ಬದಲಾಗಿ ಬಾಡಿಗೆ ಶಿಕ್ಷಕಿಯನ್ನು ನೇಮಿಸಿ, ಮಕ್ಕಳಿಗೆ ಪಾಠ ಮಾಡಿಸಿದ ಹಿನ್ನೆಲೆಯಲ್ಲಿ, ಶಿಕ್ಷಕ ಮಹೇಂದ್ರ ಕುಮಾರ್ ಅವರನ್ನು ಚಿತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಾ ರುದನೂರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಶಿಕ್ಷಕನ ಸ್ಥಾನದಲ್ಲಿ ಇದ್ದುಕೊಂಡು ಮಕ್ಕಳಿಗೆ ಪಾಠವನ್ನು ಬೋಧನೆ ಮಾಡುವ ಬದಲು,ನಿಯಮ ಬಾಹಿರವಾಗಿ ಬಾಡಿಗೆ ಶಿಕ್ಷಕಿಯನ್ನು ನೇಮಿಸಿ, ತಿಂಗಳಿಗೆ ಆರು ಸಾವಿರ ಸಂಬಳ ನೀಡಿ, ಸವಿತಾ ಎಂಬ ಮಹಿಳೆಯನ್ನು ನೇಮಿಸಿದ್ದು,ಕಾನೂನು ಬಾಹಿರವಾಗಿದ್ದು,ಇದರಿಂದ ಇಲಾಖೆಗೆ ಮುಜುಗರ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಶಿಕ್ಷಕ ಮಹೇಂದ್ರ ಕುಮಾರ್ ಬಾಡಿಗೆ ರೀತಿಯಲ್ಲಿ ಪಾಠ ಹೇಳಿಸಿಲ್ಲ ಎಂದು ಹೇಳಿಕೆ ನೀಡಿದ್ದು,ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪಾಠ ಹೇಳಿಸಲಾಗಿದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ. ಈ ಹೇಳಿಕೆ ಸಮಂಜಸವಲ್ಲ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News