ʼರನ್‌ 4 ನಮೋʼ ಅಭಿಯಾನದಲ್ಲಿ ತೇಜಸ್ವಿ ಸೂರ್ಯ ಜೊತೆ ಪಾಲ್ಗೊಂಡ ಟೆನಿಸ್‌ ತಾರೆ ರೋಹನ್‌ ಬೋಪಣ್ಣ

Update: 2024-04-16 06:58 GMT

ತೇಜಸ್ವಿ ಸೂರ್ಯ ,  ರೋಹನ್‌ ಬೋಪಣ್ಣ | PC : X \ Tejasvi_Surya

‌ಬೆಂಗಳೂರು: ಎಪ್ರಿಲ್‌ 14ರಂದು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ರನ್‌ 4 ನಮೋ ಅಭಿಯಾನದಲ್ಲಿ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಜೊತೆಗೆ ಭಾರತದ ಟೆನಿಸ್‌ ತಾರೆ ರೋಹನ್‌ ಬೋಪಣ್ಣ ಕೂಡ ಪಾಲ್ಗೊಂಡರು. ಈ ಕಾರ್ಯಕ್ರಮವನ್ನು ಜಯನಗರ್‌ ಜಾಗುವರ್ಸ್‌ ಎಂಬ ಫಿಟ್ನೆಸ್‌ ಮತ್ತು ಕ್ರೀಡಾ ತರಬೇತಿ ಕೇಂದ್ರವು ತಂಡ ಪ್ರಧಾನಿ ಮೋದಿ ಬೆಂಬಲಾರ್ಥ ಆಯೋಜಿಸಿತ್ತು.

ಈ ಸಂದರ್ಭ ಮಾತನಾಡಿದ ರೋಹನ್‌ ಬೋಪಣ್ಣ ತಮಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅತೀವ ಸಂತೋಷವಾಗಿದೆ ಎಂದು ಹೇಳಿದರು.

ತೇಜಸ್ವಿ ಸೂರ್ಯ ಮಾತನಾಡಿ ಎಲ್ಲರೂ ಎಪ್ರಿಲ್‌ 26ರಂದು ಚುನಾವಣೆಗೆ ಇರುವ ರಜೆಯನ್ನು ಪ್ರವಾಸಕ್ಕೆ ತೆರಳಲು ಬಳಸದೆ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ಹೇಳಿದರು.

ರನ್‌ 4 ನಮೋ ಬೆಂಗಳೂರಿನ ಆರ್‌ವಿ ಟೀಚರ್ಸ್‌ ಕಾಲೇಜಿನಿಂದ ಆರಂಭಗೊಂಡು ಲಾಲ್‌ ಭಾಗ್‌ ವೆಸ್ಟ್‌ ಗೇಟ್‌ ಸಮೀಪ ಕೊನೆಗೊಂಡಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಕ್ರಿಕೆಟ್‌ ತಾರೆ ಸಹನಾ ಪವಾರ್‌ ಕೂಡ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News