ಅಮಿತ್ ಶಾ ಬದ್ಧತೆ ತೋರಿಸಿದ್ದರೆ ಉಗ್ರರ ದಾಳಿ ತಡೆಯಬಹುದಿತ್ತು: ಸಚಿವ ಪ್ರಿಯಾಂಕ್ ಖರ್ಗೆ

Update: 2025-04-23 21:21 IST
ಅಮಿತ್ ಶಾ ಬದ್ಧತೆ ತೋರಿಸಿದ್ದರೆ ಉಗ್ರರ ದಾಳಿ ತಡೆಯಬಹುದಿತ್ತು: ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ

  • whatsapp icon

ಬೆಂಗಳೂರು: ಗೃಹ ಸಚಿವ ಅಮಿತ್ ಶಾ ತಮ್ಮ ಪುತ್ರ ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿ ಮಾಡಲು ತೋರುವ ಬದ್ಧತೆಯಂತೆಯೇ, ವಿದೇಶಿ ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆಸಕ್ತಿ ತೋರಿಸಿದ್ದರೆ, ಚೀನಾ ಭಾರತದ ನೆಲದಲ್ಲಿ ನುಸುಳುತ್ತಿರಲಿಲ್ಲ, ಉಗ್ರರ ದಾಳಿಯನ್ನೂ ತಡೆಯಬಹುದಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಚಾಣಕ್ಯ ಎಂದು ಕರೆಯಲ್ಪಡುವ ಗೃಹ ಸಚಿವ ಅಮಿತ್ ಶಾ ಸರಕಾರಗಳನ್ನು ಉರುಳಿಸುವಲ್ಲಿ, ಪಕ್ಷಗಳನ್ನು ಒಡೆಯುವಲ್ಲಿ ಮತ್ತು ಚುನಾವಣೆಗಳಲ್ಲಿ ಅಕ್ರಮ ನಡೆಸುವಲ್ಲಿ ನಿರತರಾಗಿರುವಾಗ, ಉಗ್ರರು ಈ ದಾಳಿ ನಡೆದಿದೆ. ಗುಪ್ತಚರ ಎಲ್ಲಿದೆ? ಕಣ್ಗಾವಲು ಎಲ್ಲಿದೆ? ಜೇಮ್ಸ್ ಬಾಂಡ್ ದೋವಲ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ದಾಳಿ ಮತ್ತು ಪುಲ್ವಾಮ ದಾಳಿ ಸಂದರ್ಭಗಳಲ್ಲಿ ಭದ್ರತಾ ಲೋಪಗಳನ್ನು ಮೊದಲೇ ಗುರುತಿಸಲಾಗಿತ್ತು. ಎರಡನ್ನೂ ನಿರ್ಲಕ್ಷಿಸಲಾಗಿದೆ. ಹಾಗೆಯೇ ಬಿಜೆಪಿ ಸರಕಾರವು ಕೋವಿಡ್ ನಂತರ ಹಣವನ್ನು ಉಳಿಸಲು 1.8 ಲಕ್ಷಕ್ಕೂ ಹೆಚ್ಚು ಸೇನಾ ಸಿಬ್ಬಂದಿಯನ್ನು ಕಡಿತಗೊಳಿಸಿರುವುದು ಆಘಾತಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಾರಿ ಮಾಧ್ಯಮಗಳು ಪುಲ್ವಾಮಾಕ್ಕೆ ಹೋಲಿಸಿದರೆ ಉತ್ತಮವಾಗಿ ಮತ್ತು ಹೆಚ್ಚು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಕೇಂದ್ರದ ಬಜೆಪಿ ಸರಕಾರವು ಈ ದುರಂತದ ಮೂಲಕ ಕೋಮು ಉದ್ವಿಗ್ನತೆಯನ್ನು ಹುಟ್ಟುಹಾಕಲಿದೆ. ಹಾಗೆಯೇ ಅಲ್ಲಿನ ಕಾಂಗ್ರೆಸ್ ಅನ್ನು ಎಂದಿನಂತೆ ದೂಷಿಸಲು ಬಳಸಿಕೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಗೃಹ ಸಚಿವ ಶಾ ಅವರ ರಾಜೀನಾಮೆಗೆ ಆದೇಶಿಸುವ ಧೈರ್ಯ ಪ್ರಧಾನಿಗೆ ಇದೆಯೇ? ಆರೆಸ್ಸೆಸ್‍ನ ಆಕ್ರಮಣವು ಕೇವಲ ವಿಜಯದಶಮಿ ಉತ್ಸವ ಭಾಷಣಗಳಿಗೆ, ಅಲ್ಪಸಂಖ್ಯಾತ ಮತ್ತು ದಲಿತರ ಮೇಲಿನ ಆಕ್ರಮಣಕ್ಕೆ ಮಾತ್ರ ಸೀಮಿತವಾಗುತ್ತದೆಯೇ? ಪ್ರಧಾನಿಗೆ ಬಾಗಿಲು ತೋರಿಸುವಷ್ಟು ಶಕ್ತಿ ಅವರಲ್ಲಿದೆಯೇ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News