ತುಮಕೂರು: ಮೌಢ್ಯಕ್ಕೆ ಬಲಿಯಾದ ಮಗುವಿನ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ

Update: 2023-08-02 15:06 GMT

ತುಮಕೂರು: ಕೊರಟಗೆರೆ ತಾಲೂಕಿನ ಬಡಮುದ್ದಯ್ಯನಪಾಳ್ಯದಲ್ಲಿ ಹೂಳಲಾಗಿದ್ದ ಮಗುವಿನ ಮೃತದೇಹವನ್ನು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಉಪಸ್ಥಿತಿಯಲ್ಲಿ ಮಂಗಳವಾರ ಹೊರತೆಗೆದು ಕೆಲವು ಅಂಗಾಂಗವನ್ನು ಸಂಗ್ರಹಿಸಲಾಯಿತು.

ತುಮಕೂರು ತಾಲೂಕಿನ ವಸಂತ ಎಂಬುವವ ಹೆಣ್ಣುಮಗಳನ್ಬು ಕೊರಟಗೆರೆ ತಾಲ್ಲೂಕಿನ ಬಡಮುದ್ದಯ್ಯನಪಾಳ್ಯದ ಸಿದ್ದೇಶ್ ಎಂಬವರಿಗೆ ವಿವಾಹವಾಗಿದ್ದು, ವಸಂತ ಹೆರಿಗೆ ಸಮಯವಾದ ಹಿನ್ನೆಲೆಯಲ್ಲಿ ಗೊಲ್ಲ ಸಮುದಾಯದ ಸಂಪ್ರದಾಯದಂತೆ ಗುಡಿಸಲಿನಲ್ಲಿ ಇರಿಸಲಾಗಿತ್ತು. ಪ್ರಿ ಮೆಚೂರ್ ಬೇಬಿಯಾಗಿ ಒಂದು ಮಗು ಅಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟರೆ ಮತ್ತೊಂದು ಊರ ಹೊರಗಿನ ಗುಡಿಸಲಿನಲ್ಲಿ ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಜುಲೈ 22 ರಂದು ಸಾವನ್ನಪ್ಪಿತ್ತು. ಆ ನಂತರ ಮಗುವನ್ನು ಸಿದ್ದೇಶ್ ಅವರ ಗ್ರಾಮವಾದ ಕೊರಟಗೆರೆ ತಾಲ್ಲೂಕಿನ ಬಡಮುದ್ದಯ್ಯನಪಾಳ್ಯದ ತಮ್ಮ ಜಮೀನನಲ್ಲಿ ಶವ ಸಂಸ್ಕಾರ ಮಾಡಲಾಗಿತ್ತು.

ಮಗು ಸಾವಿನ ನಂತರವೂ ಬಾಣಂತಿಯನ್ನು ಊರ ಒಳಗೆ ಕರೆದುಕೊಳ್ಳದೆ ಗುಡಿಸಲಿನಲ್ಲಿಯೇ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ತಿಕೆ ನಂತರ ಬಾಣಂತಿಯನ್ನು ಊರ ಒಳಗೆಗೆ ಸೇರಿಸಿದ ಗೊಲ್ಲರಹಟ್ಟಿಯ ಜನತೆ, ನಂತರ ಚಿಕ್ಸಿತೆಗೆ ದಾಖಲಿಸಿದ್ದರು.ಈ ಸಂಬಂಧ ಮೂವರ ಮೇಲೆ ಕೇಸು ಸಹ ದಾಖಲಾಗಿತ್ತು.ಇದೀಗ ಮಗು ಸಾವಿಗೆ ಸಂಬಂಧಿಸಿದಂತೆ ನಿಜವಾದ ಕಾರಣ ಅರಿಯಲು ಸಾವನ್ನಪ್ಪಿದ ಮಗುವಿನ ಮರಣೋತ್ತರ ಪರೀಕ್ಷೆಗೆ ಮುಂದಾಗಿರುವ ತಾಲೂಕು ಆಡಳಿತ, ಮಗುವನ್ನು ಗುಂಡಿಯಿಂದ ಹೊರತೆಗೆದು, ದೇಹದ ಕೆಲ ಭಾಗಗಳನ್ನು ಸಂಗ್ರಹಿಸಿಕೊಂಡು ಬಂದಿದೆ.

ಮಗು ಮಳೆ.ಚಳಿಗೆ ತಡೆದುಕೊಳ್ಳಲಾಗದೆ ಸಾವನ್ನಪ್ಪಿದೆಯೇ ಇಲ್ಲವೇ ಜನ್ನಜಾತ ರೋಗದಿಂದ ಮೃತ ಹೊಂದಿದೆಯೇ ಎಂದು ತಿಳಿಯಲು ಈ ಕ್ರಮ ಕೈಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News