ದೇವಸ್ಥಾನದಲ್ಲಿ ಸಿಬ್ಬಂದಿಯಿಂದಲೇ ಹುಂಡಿ ಹಣ ಕಳ್ಳತನದ ದೃಶ್ಯ ವಿಡಿಯೋದಲ್ಲಿ ಸೆರೆ

Update: 2024-09-29 08:37 GMT

Screengrab:X

ಬೆಂಗಳೂರು: ಬ್ಯಾಟರಾಯನಪುರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಬ್ಬಂದಿಗಳೇ ಹುಂಡಿ ಹಣ ಕಳ್ಳತನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ದೇವಸ್ಥಾನದ ಹುಂಡಿಯ ಕಾಣಿಕೆ ಹಣವನ್ನು ಚಾಪೆ ಮೇಲೆ ರಾಶಿ ರಾಶಿ ಹಾಕಲಾಗಿದೆ. ಇನ್ನೊಂದು ಕಡೆ 500 ರೂ. ನೋಟ್ ಗಳ ಕಂತೆಯನ್ನು ಕ್ರಮವಾಗಿ ಮೇಜಿನ ಮೇಲೆ ಜೋಡಿಸಿಡಲಾಗಿದೆ. ಈ ವೇಳೆ ಕೆಲ ಸಿಬ್ಬಂದಿಗಳು 500ರೂ, ನೋಟುಗಳು ಕಂತೆಯನ್ನು ಕಳ್ಳತನ ಮಾಡುವುದು, ಹಣವನ್ನು ಜೇಬಿನಲ್ಲಿರಿಸಿಕೊಂಡು ಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತ ಘಟನೆಯ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಧೋತಿಯಲ್ಲಿರುವ ದೇವಸ್ಥಾನದ ಕೆಲವು ಸಿಬ್ಬಂದಿಗಳು ಲೂಟಿಯ ಭಾಗವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ಸಮುದಾಯಕ್ಕೆ ಅಪಖ್ಯಾತಿ ತಂದಿದ್ದಾರೆ. ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ, ಘಟನೆಯು ಒಂದು ವರ್ಷದ ಹಿಂದೆ ಸಂಭವಿಸಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಕಾರ್ಯಕಾರಿ ಸಮಿತಿ ಸದಸ್ಯರನ್ನು ಮತ್ತು ಇಬ್ಬರು ಅಡುಗೆ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News