ಸರಕಾರವೇ ಪತನಗೊಳ್ಳುವಾಗ ಪ್ರತಿಪಕ್ಷ ನಾಯಕ ಏಕೆ ಬೇಕು?: ಬಿಜೆಪಿ ಶಾಸಕ ಯತ್ನಾಳ್
Update: 2023-11-01 14:35 GMT
ವಿಜಯಪುರ: ʼರಾಜ್ಯದಲ್ಲಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವುದರೊಳಗಾಗಿ ಕಾಂಗ್ರೆಸ್ ಸರ್ಕಾರವೇ ಇಲ್ಲದಂತಾಗಬಹುದು. ಹೀಗಾಗಿ ಪ್ರತಿಪಕ್ಷ ನಾಯಕ ಏಕೆ ಮಾಡಬೇಕು?ʼ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಪ್ರಶ್ನಿಸಿದ್ದಾರೆ.
ನನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಈಗಾಗಲೇ 5 ತಿಂಗಳಲ್ಲಿ ಸರ್ಕಾರದ ಹಣೆಬರಹ ಏನೆಂಬುದು ಜನತೆಗೆ ಗೊತ್ತಾಗಿದೆ. ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಈ ಸರಕಾರ ಬಹಳ ದಿನ ಉಳಿಯುವುದಿಲ್ಲʼʼ ಎಂದು ಭವಿಷ್ಯ ನುಡಿದರು.
ʼʼಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಮಹಾನ್ ನಾಯಕರೊಬ್ಬರು ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಸೀಡಿ ನಾಟಕ ಮಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಸೀಡಿ ತಯಾರಿಸುವ ಕಂಪನಿಯೇ ಇದೆ. ಇದಕ್ಕೆ ಪ್ರಮುಖ ನಾಯಕರೊಬ್ಬರು ಮುಖ್ಯಸ್ಥರುʼʼ ಎಂದು ಆರೋಪಿಸಿದರು.