ಮುಝಫರ್ ಅಸ್ಸಾದಿ ನಿಧನಕ್ಕೆ ಝಮೀರ್ ಅಹಮದ್ ಖಾನ್ ಸಂತಾಪ
Update: 2025-01-04 06:42 GMT
ಬೆಂಗಳೂರು: ಚಿಂತಕ ಹಾಗೂ ರಾಜಕೀಯ ತಜ್ಞ ಪ್ರೊ.ಮುಝಫರ್ ಅಸ್ಸಾದಿ ನಿಧನಕ್ಕೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸ್ಸಾದಿ ಅವರು ಮೈಸೂರು ವಿಶ್ವ ವಿದ್ಯಾಲಯದ ಹಂಗಾಮಿ ಕುಲಪತಿ ಸೇರಿ ಹಲವು ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡು ದಕ್ಷತೆ ಯಿಂದ ಕೆಲಸ ಮಾಡಿದ್ದರು. ಜನಪರ ಹಾಗೂ ಪ್ರಗತಿಪರ ಚಿಂತನೆ ಮೂಲಕ ಜನ ಸಮುದಾಯಗಳ ಒಳಿತು ಬಯಸುತ್ತಿದ್ದರು. ಇವರ ನಿಧನ ದಿಂದ ನಿಧನದಿಂದ ರಾಜ್ಯ ಒಬ್ಬ ಸಮಾಜಮುಖಿ ಚಿಂತಕ ನನ್ನು ಕಳೆದುಕೊಂಡಂತಾಗಿದೆ ಎಂದು ಜಮೀರ್ ಅಹಮದ್ ಖಾನ್ ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.