ಸಾಮಾಜಿಕ ತಾಣದಲ್ಲಿ 'ಸೆನ್ಸಾರ್‌ಶಿಪ್': ಭಾರತ ಸರಕಾರದ ಆದೇಶದ ವಿರುದ್ಧ ಮಸ್ಕ್ ಕಿಡಿ
ಸಾಮಾಜಿಕ ಜಾಲತಾಣಗಳ ವಿಷಯಗಳನ್ನು ಕಿತ್ತುಹಾಕುವಂತೆ ಸಂಬಂಧಿಸಿದಂತೆ ನ್ಯಾಯಾಲಯದ ನೀಡಿರುವ ಆದೇಶ ಭಾರತದ ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ಪೂರಕವಾಗಿಲ್ಲ ಎಂದು ಆಪಾದಿಸಿ ಈ ಆದೇಶವನ್ನು ಅನೂರ್ಜಿತಗೊಳಿಸುವಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮನವಿ ಮಾಡಿದೆ. ಇದು ಸರ್ಕಾರ ಹೆಚ್ಚು ಹೆಚ್ಚು ವಿಷಯಗಳನ್ನು ತಡೆಯಲು ಮತ್ತು ಸೆನ್ಸಾರ್‍ಶಿಪ್ ಅವಕಾಶವನ್ನು ಇನ್ನಷ್ಟು ವಿಸ್ತೃತಗೊಳಿಸಲು ನೆರವಾಗಲಿದೆ ಎಂದು ಕಂಪನಿ ವಾದಿಸಿದೆ.
ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ‘X’, ತನ್ನ ಪ್ಲಾಟ್‍ಫಾರಂನಿಂದ ಕೆಲ ವಿಷಯಗಳನ್ನು ಕಿತ್ತುಹಾಕುವಂತೆ ಸೂಚಿಸಿದ ಕೇಂದ್ರದ ನಿರ್ದೇಶನ ರದ್ದುಪಡಿಸುವಂತೆ 2022ರ ಜುಲೈನಲ್ಲಿ ಮನವಿ ಮಾಡಿತ್ತು. ಇದನ್ನು ತಳ್ಳಿಹಾಕಿದ ನ್ಯಾಯಾಲಯ ಈ ಕಂಪನಿಗೆ 50 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಈ ಆದೇಶದ ವಿರುದ್ಧ ಕಂಪನಿ ಮೇಲ್ಮನವಿ ಸಲ್ಲಿಸಿದ್ದು, ಇದು ಕಾನೂನನ್ನು ಉಲ್ಲಂಘಿಸಿ, ಇನ್ನಷ್ಟು ವಿಷಯಗಳನ್ನು ಕಿತ್ತುಹಾಕುವಂಥ ಆದೇಶಗಳಿಗೆ ಕಾರಣವಾಗಲಿದೆ ಎಂದು 96 ಪುಟಗಳ ಹೇಳಿಕೆಯಲ್ಲಿ ಆಪಾದಿಸಿದೆ. ಆಗಸ್ಟ್ 1ರ ದಿನಾಂಕದ ಈ ಹೇಳಿಕೆಯನ್ನು ಸ್ಥಳೀಯ ಕಾನೂನು ಸಂಸ್ಥೆಯಾದ ಪೂವಯ್ಯ & ಕಂಪನಿ ಮೂಲಕ ಕರ್ನಾಟಕ ಹೈಕೋರ್ಟ್‍ಗೆ ಸಲ್ಲಿಸಲಾಗಿದೆ.
ಈ ಮೂಲ ದಾವೆಯನ್ನು ಭಾರತದಲ್ಲಿ ಹಲವು ವಹಿವಾಟುಗಳನ್ನು ನಡೆಸುತ್ತಿರುವ ಎಲಾನ್ ಮಸ್ಕ್ ಹೂಡಿದ್ದಾರೆ. ಟೆಸ್ಲಾ ಮುಖ್ಯಸ್ಥ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪದನಾ ಘಟಕ ಸ್ಥಾಪಿಸುವ ಹೂಡಿಕೆ ಪ್ರಸ್ತಾವನೆಗಳ ಬಗ್ಗೆ ಚಚಿಸುತ್ತಿದ್ದು, ಉಪಗ್ರಹ ಬ್ರಾಡ್‍ಬ್ಯಾಂಡ್ ಸೇವೆ ಸ್ಪೇಸ್‍ಎಕ್ಸ್ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.