ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಶಶಿ ಆರ್. ಬಂಡಿಮಾರ್ ಹೃದಯಾಘಾತದಿಂದ ನಿಧನ

Update: 2025-01-30 09:05 GMT
ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕ ಶಶಿ ಆರ್. ಬಂಡಿಮಾರ್ ಹೃದಯಾಘಾತದಿಂದ ನಿಧನ
  • whatsapp icon

ಮಂಗಳೂರು: "ಟೈಮ್ಸ್ ಆಫ್ ಕುಡ್ಲ" ತುಳು ಪತ್ರಿಕೆಯ ಪ್ರಧಾನ ಸಂಪಾದಕ ಶಶಿ ಆರ್. ಬಂಡಿಮಾರ್ (41) ಬುಧವಾರ ರಾತ್ರಿ ನಾಗಾಲ್ಯಾಂಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು.

ತುಳು ಸಂಸ್ಕೃತಿ ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿ "ಟೈಮ್ಸ್ ಆಫ್ ಕುಡ್ಲ" ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಸಣ್ಣ ಕೈಗಾರಿಕೆಯಲ್ಲೂ, ಆತಿಥ್ಯ ಕ್ಷೇತ್ರ ದಲ್ಲೂ ಸಕ್ರಿಯವಾಗಿದ್ದ ಅವರು ನಾಗಾಲ್ಯಾಂಡ್ ನಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಅನಾರೋಗ್ಯ ಕಾಡಿತ್ತು.

ಶಶಿ ಬಂಡಿಮಾರ್ ಅವರಿಗೆ ಜೈ ತುಲುನಾಡ್ (ರಿ) ಸಂಘಟನೆ "ತುಳುವ ನೇಸರೆ" ಎನ್ನುವ ಬಿರುದು ಸೇರಿದಂತೆ ಅನೇಕ ಬಿರುದು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಅವರು ತಾಯಿ, ಪತ್ನಿ, ಸಹೋದರಿ, ಇಬ್ಬರು ಸಹೋದರರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News