ಈಜಿಪ್ಟ್: 11ನೇ ಶತಮಾನದ ಐತಿಹಾಸಿಕ ಅಲ್-ಹಕೀಂ ಮಸೀದಿಗೆ ಮೋದಿ ಭೇಟಿ
Update: 2023-06-25 18:25 GMT
ಕೈರೋ, ಜೂ.25: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಈಜಿಪ್ಟ್ ಪ್ರವಾಸದ ಎರಡನೇ ದಿನವಾದ ರವಿವಾರ ಕೈರೋದಲ್ಲಿಯ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಂ ಮಸೀದಿಗೆ ಭೇಟಿ ನೀಡಿದರು. ಈ ಮಸೀದಿಯು ಭಾರತದ ದಾವೂದಿ ಬೊಹ್ರಾ ಸಮುದಾಯದ ನೆರವಿನೊಂದಿಗೆ ಇತ್ತೀಚೆಗೆ ನವೀಕರಣಗೊಂಡಿದೆ.
ಮೂರು ತಿಂಗಳ ಹಿಂದೆ ನವೀಕರಣ ಪೂರ್ಣಗೊಂಡಿರುವ ಮಸೀದಿಯ ಸುತ್ತಲಿನ ಪರಿಸರವನ್ನು ಮೋದಿಯವರಿಗೆ ತೋರಿಸಲಾಯಿತು.
ಮಸೀದಿಯು ಮುಖ್ಯವಾಗಿ ಶುಕ್ರವಾರದ ಪ್ರಾರ್ಥನೆ ಮತ್ತು ಎಲ್ಲ ಐದೂ ಕಡ್ಡಾಯ ಪ್ರಾರ್ಥನೆಗಳನ್ನು ನಿರ್ವಹಿಸುತ್ತದೆ.
1012ರಲ್ಲಿ ನಿರ್ಮಿಸಲಾಗಿರುವ ಮಸೀದಿಯ ಗೋಡೆಗಳು ಮತ್ತು ದ್ವಾರಗಳಲ್ಲಿ ಕೆತ್ತಲಾಗಿರುವ ಸಂಕೀರ್ಣ ಶಾಸನಗಳನ್ನು ಮೋದಿ ಶ್ಲಾಘಿಸಿದರು.
ಮೋದಿಯವರು ಪ್ರಧಾನಿಯಾಗುವ ಮೊದಲಿನಿಂದಲೂ ದಾವೂದಿ ಬೊಹ್ರಾಗಳೊಂದಿಗೆ ಸುದೀರ್ಘ ಮತ್ತು ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.