ಜಮ್ಮುಕಾಶ್ಮೀರ | ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಜೊತೆ ಗುಂಡಿನ ಚಕಮಕಿ : ಸೇನಾಧಿಕಾರಿ ಹುತಾತ್ಮ

Update: 2025-04-12 10:38 IST
ಜಮ್ಮುಕಾಶ್ಮೀರ | ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಜೊತೆ ಗುಂಡಿನ ಚಕಮಕಿ : ಸೇನಾಧಿಕಾರಿ ಹುತಾತ್ಮ

Photo | PTI

  • whatsapp icon

ಜಮ್ಮುಕಾಶ್ಮೀರ: ಅಖ್ನೂರ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಭಯೋತ್ಪಾದಕರ ಜೊತೆಗಿನ ಗುಂಡಿನ ಚಕಮಕಿಯ ವೇಳೆ ಸೇನಾಧಿಕಾರಿಯೋರ್ವರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ.

ಶುಕ್ರವಾರ ತಡರಾತ್ರಿ ಅಖ್ನೂರ್ ಕೇರಿ ಭಟ್ಟಲ್ ಪ್ರದೇಶದ ಅರಣ್ಯದಲ್ಲಿ ಶಸ್ತಾಸ್ತ್ರಗಳೊಂದಿಗೆ ಹಲವು ಭಯೋತ್ಪಾದಕರು ಒಳನುಸಳಲು ಯತ್ನಿಸುತ್ತಿದ್ದರು. ಕೂಡಲೇ ಕಾರ್ಯಪೃವೃತ್ತರಾದ ಸೇನಾ ಪಡೆ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ವೇಳೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News