ಉಡುಪಿ: ಎ.17ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
Update: 2025-04-16 21:28 IST

ಉಡುಪಿ, ಎ.16: ಉಡುಪಿ ನಗರಸಭಾ ವ್ಯಾಪ್ತಿಯ ಕಲ್ಮಾಡಿ ಮತ್ತು ಕೊಡವೂರು ಪ್ರದೇಶದಲ್ಲಿ ಎ.17ರಂದು ವಾರಾಹಿ ಯೋಜನೆಯಿಂದ ಕೊಳವೆ ಲಿಂಕಿಂಗ್ ಕಾಮಗಾರಿ ನಡೆಯಲಿರುವುದರಿಂದ ಅಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕಲ್ಮಾಡಿ, ಕೊಡವೂರು ಮತ್ತು ಪಾಳೆಕಟ್ಟೆ ಓವರ್‌ಹೆಡ್ ಟ್ಯಾಂಕ್‌ಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿ ಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.