ಮಾಹೆ: ಎಚ್‌ಎಲ್‌ವಿಎಂ3 ರಾಕೆಟ್ ಮಾದರಿ ಪ್ರದರ್ಶನ
ಮಣಿಪಾಲ, ಡಿ.11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ದಿ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈ ಝೇಶನ್-ಇಸ್ರೋ)ಯ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ‘ಗಗನಯಾನ’ದಲ್ಲಿ ಮಾನವನ ಸಹಿತ ಬಾಹ್ಯಾ ಕಾಶಕ್ಕೆ ಹಾರಿಬಿಡುವ ಮಾನವ ಶ್ರೇಣಿಯ ಎಲ್‌ವಿಎಂ3 (ಎಚ್‌ಎಲ್‌ವಿಎಂ3) ರಾಕೆಟ್‌ನ ಮಾದರಿಯನ್ನು ಮಾಹೆಯ ಮಣಿಪಾಲ ಸೆಂಟರ್ ಆಪ್ ನ್ಯಾಚುರಲ್ ಸಾಯನ್ಸ್‌ನ ಆವರಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಗಗನಯಾನ ಯೋಜನೆಯು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ತರಲು ವಿನ್ಯಾಸಗೊಳಿಸಿ ಕಾರ್ಯರೂಪಕ್ಕೆ ತರುವ ಸಿದ್ಧತೆ ನಡೆಯುತ್ತಿದೆ. ಇದೀಗ ಮಣಿಪಾಲದಲ್ಲಿ ಮಾನವ-ಶ್ರೇಣಿಯ ಎಲ್‌ವಿಎಂ 3 ರಾಕೆಚ್‌ನ 1:10 ಶ್ರೇಣಿ ಮಾಡೆಲ್- ಇಸ್ರೋದ ಎಲ್‌ವಿಎಂ3ನ ನವೀಕರಿಸಿದ ಆವೃತ್ತಿಯನ್ನು ಮಣಿಪಾಲದ ಎಂಸಿಎನ್‌ಎಸ್ ಕೇಂದ್ರದ ಹೊರಗೆ ಸ್ಥಾಪಿಸಲಾಗಿದೆ.
ಪುಣೆಯ ಇಂಡಿಕ್ ಇನ್‌ಸ್ಪಿರೇಷನ್ಸ್ ವಿನ್ಯಾಸಗೊಳಿಸಿ ತಯಾರಿಸಿದ ಈ ಪ್ರದರ್ಶನ ಎಚ್‌ಎಲ್‌ವಿಎಂ3 ರಾಕೆಟ್ ಮಾದರಿಯ ಏಕೈಕ ಸಾರ್ವಜನಿಕ ಪ್ರದರ್ಶನವಾಗಿದೆ. ಇದನ್ನು ಮಾಹೆ ಮಣಿಪಾಲದ ಕುಲಪತಿ ಲೆ. ಜ. (ಡಾ.) ಎಂ.ಡಿ.ವೆಂಕಟೇಶ್ ಮತ್ತು ಸಹಉಪಕುಲಪತಿ ಡಾ.ನಾರಾಯಣ ಸಭಾಹಿತ್ ಉದ್ಘಾಟಿಸಿದರು.
ಈ ರಾಕೆಟ್ ಮಾದರಿಯ ಪ್ರದರ್ಶನ ಡಿ.15ರವರೆಗೆ ಎಂಸಿಎನ್‌ಎಸ್ ಕೇಂದ್ರದಲ್ಲಿ ನಡೆಯಲಿದೆ. ರಾಕೆಟ್ ಮಾದರಿಯ ಪ್ರದರ್ಶನವು ಮಾಹೆಯ ಡಾ.ಟಿಎಂಎ ಪೈ ತಾರಾಲಯಕ್ಕೆ ಭೇಟಿ ನೀಡುವವರಿಗೆ ಆಕರ್ಷಕ ಅನುಭವ ವನ್ನು ನೀಡಲಿದೆ. ತಾರಾಲಯ ಪ್ರದರ್ಶನಗಳು ಮತ್ತು ಹೊಸ ಬಾಹ್ಯಾಕಾಶ ವಿಜ್ಞಾನ ಪ್ರದರ್ಶನ ಎಲ್ಲರಿಗೂ ತೆರೆದಿರುತ್ತವೆ. ಆಸಕ್ತರು ತಾರಾಲಯ ಹಾಗೂ ರಾಕೆಟ್ ಮಾದರಿಯ ಪ್ರದರ್ಶನಕ್ಕೆ ಭೇಟಿ ನೀಡಬಹುದು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.