ರಾಜ್ಯ ನೇತ್ರತಜ್ಞರ 43ನೇ ವಾರ್ಷಿಕ ಸಮ್ಮೇಳನ ‘ಕೋಸ್ಕೊನ್’ ಉದ್ಘಾಟನೆ
ಕುಂದಾಪುರ: ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ ಮೂರು ದಿನಗಳ ೪೩ನೇ ವಾರ್ಷಿಕ ಸಮ್ಮೇಳನ ‘ಕೋಸ್ಕೊನ್’ ಶುಕ್ರವಾರ ಕೋಟೇಶ್ವರದ ಯುವ ಮೇರಿಡಿಯನ್ ಸಭಾಭವನದಲ್ಲಿ ಚಾಲನೆ ನೀಡಲಾಯಿತು.
ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಶಕ್ತಿ ಹಾಗೂ ಇಂಧನ ಖಾತೆ ಸಚಿವ ಶ್ರೀಪಾದ ಯಶೋ ನಾಯಕ್ ಮಾತನಾಡಿ, ೨೦೦೦ ಪ್ರತಿನಿಧಿಗಳು ಸೇರಿರುವ ನೇತ್ರ ತಜ್ಞರ ಈ ಕಾರ್ಯಕ್ರಮ ವಿಜ್ಞಾನ ಹಾಗೂ ಪರಂಪರೆ ಹೆಸರಿನಲ್ಲಿ ನಡೆಯಲಿದೆ. ಬಹಳಷ್ಟು ಶ್ರಮಪಟ್ಟು ಈ ಕಾರ್ಯಕ್ರಮ ರೂಪಿಸಲಾಗಿದೆ. ನೇತ್ರತಜ್ಞರ ಸೇವೆ ಗ್ರಾಮ ಗ್ರಾಮಗಳಿಗೆ ಪಸರಿಸಬೇಕು ಎಂದರು.
ಮಣಿಪಾಲ ಎಕಾಡಮಿ ಹೈಯರ್ ಎಜುಕೇಷನ್ ಉಪ ಕುಲಪತಿ ಡಾ. ಎಚ್.ಎಸ್.ಬಲ್ಲಾಳ್ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಸಾಧಕ ಹಿರಿಯ ನೇತ್ರ ತಜ್ಞರನ್ನು ಸನ್ಮಸನಿಸಲಾಯಿತು.
ಭಾರತೀಯ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ, ಡಾ.ಎನ್.ಟಿ.ಶ್ರೀನಿವಾಸ್, ಡಾ.ಚಂದ್ರಶೇಖರ ಶೆಟ್ಟಿ, ಕೋಸ್ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಕೂಡ್ಲು, ಡಾ.ಹೇಮಂತ್ ಮೂರ್ತಿ, ಡಾ. ಶಿವರಾಮ್ ಕೆ.ವಿ., ಡಾ.ಚೈತ್ರ ಜಯದೇವ, ಡಾ.ಸಚಿನ್ ಮಹೋಲಿ, ಡಾ. ವಿಕ್ರಮ್ ಜೈನ್, ಡಾ.ಎಲಮ್ ಕುಮಾರ, ಡಾ.ಕವಿತ ವಿ., ಡಾ.ಶ್ರೀನಾಥ್ ಕಾಮತ್, ಡಾ.ಸಂದೀಪ್ ಶೆಣೈ, ಡಾ.ಯೋಗೀಶ್ ಕಾಮತ್, ಯುವ ಮೇರಿಡಿಯನ್ ಆಡಳಿತ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ ಬೈಲೂರು, ಡಾ.ಸಮಂತ ಶೆಟ್ಟಿ, ಡಾ.ಶರತ್ ಹೆಗ್ಡೆ, ಡಾ.ಚಿನ್ನಪ್ಪ, ಡಾ.ಶೈಲಜಾ ಉಪಸ್ಥಿತರಿದ್ದರು.