ಉಡುಪಿ: 46ನೆ ವಾದಿರಾಜ ಕನಕದಾಸ ಸಂಗೀತೋತ್ಸವ
ಉಡುಪಿ: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕ ದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಎಂಜಿಎಂ ಕಾಲೇಜು ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವರ ಸಹಯೋಗದಲ್ಲಿ 46ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿಯ ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಟಿ.ರಂಗ ಪೈ ಉದ್ಘಾ ಟಿಸಿ ಮಾತನಾಡಿ, ಈ ಸಂಗೀತೋತ್ಸವ ಆಸಕ್ತ ಯುವ ಜನತೆಗೆ ಮಾದರಿಯಾಗಿದೆ.ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಹಿತ್ಯ, ಸಂಗೀತಗಳು ಸೇರಿ ಭಕ್ತಿ ರಸವನ್ನು ಉತ್ಪಾದಿಸುತ್ತವೆ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಅನಿಲ್‌ಕುಮಾರ್ ಶೆಟ್ಟಿ ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ಸರಿಗಮ ಭಾರತಿ ಸಂಗೀತ ದ್ಯಾಲಯ ಪರ್ಕಳ ಇದರ ನಿರ್ದೇಶಕ ರಾದ ಉಮಾಶಂಕರಿ ಪ್ರಾರ್ಥಿಸಿದರು. ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಕರ್ನಾಟಕ ಕಲಾಶ್ರೀ ತಿರುಮಲೆ ಶ್ರೀನಿವಾಸ ಬೆಂಗಳೂರು ಮತ್ತು ಬಳಗದಿಂದ ಸಂಗೀತ ಕಚೇರಿ ನಡೆಯಿತು. ಮರುದಿನ ಮಂಜುಳಾ ಸುಬ್ರಹ್ಮಣ್ಯ ಮಂಚಿ ಇವರಿಂದ ಕನಕದಾಸರ ಮೋಹನ ತರಂಗಿಣಿಯ ಆಯ್ದ ಭಾಗದ ಕಾವ್ಯ ವಾಚನ ನಡೆದರೆ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನ ನೀಡಿದರು.
ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಾದಿರಾಜ ಕನಕದಾಸ ಕೀರ್ತನಾ ಸ್ಪರ್ಧೆ ನಡೆಯಿತು. ಕೊನೆಯ ದಿನ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು. ಬೆಂಗಳೂರಿನ ತಿರುಮಲೆ ಶ್ರೀನಿವಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಉಡುಪಿಯ ಮಂಜುನಾಥ ಭಟ್ ಹಾಗೂ ಬಳಗದಿಂದ ಹಿಂದೂಸ್ಥಾನಿ ಸಂಗೀತ ಕಚೇರಿ ನಡೆಯಿತು.
ಕೀರ್ತನಾ ಸ್ಪರ್ಧೆಯ ವಿಜೇತರು:
ಎಲ್‌ಕೆಜಿ-4ನೇ ತರಗತಿ: 1.ಸಾಂಘವಿ,ಮಾಧವಕೃಪಾ ಮಣಿಪಾಲ, 2. ಧೃತಿ, ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, 3. ಸರಯು, ಮಾಧವ ಕೃಪಾ ಮಣಿಪಾಲ. 5ರಿಂದ 7ನೇ ತರಗತಿ: 1.ಪರ್ಜನ್ಯ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, 2.ಅನುಶ್ರೀ, ಅಂಬಿಕಾ ವಿದ್ಯಾಲಯ ಪುತ್ತೂರು, ಮಂಗಳೂರು, 3.ಸ್ವಸ್ತಿ ಎಂ. ಭಟ್, ಮಾಧವ ಕೃಪಾ ಮಣಿಪಾಲ.
8ರಿಂದ ದ್ವಿ.ಪಿಯುಸಿ: 1.ಶ್ರೀವತ್ಸ ತಂತ್ರಿ, ಶ್ರೀಲಕ್ಷ್ಮೀಜನಾರ್ದನ ಇಂಟರ್ ನ್ಯಾಶನಲ್ ಸ್ಕೂಲ್ ನಂದಳಿಕೆ, 2.ಅಥರ್ವಾ ದೀಪರಾಜ್ ಹೆಗ್ಡೆ, ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, 3.ಪ್ರಾರ್ಥನಾ, ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ. ಪದವಿ, ಸ್ನಾತಕೋತ್ತರ ಹಾಗೂ ಸಾರ್ವಜನಿ ವಿಭಾಗ: 1.ಶರಣ್ಯ ತಂತ್ರಿ ನಂದಳಿಕೆ, ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿ ಬಂಟಕಲ್ಲು, 2.ಬಿ.ಆರ್. ಅಡಿಗ, ಉಡುಪಿ, 3.ರವಿದಾಸ್ ಪೆರ್ಡೂರು.