ಸಿಇಟಿ ಪರೀಕ್ಷೆ: ಒಟ್ಟು 912 ಮಂದಿ ಗೈರು
Update: 2025-04-17 22:00 IST

ಉಡುಪಿ, ಎ.17: ವೈದ್ಯಕೀಯ ಹೊರತುಪಡಿಸಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ರಾಜ್ಯದಲ್ಲಿ ಪ್ರವೇಶ ಕಲ್ಪಿಸುವ ಈ ಬಾರಿಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಣಿತ ಶಾಸ್ತ್ರ (463) ಹಾಗೂ ಜೀವ ಶಾಸ್ತ್ರ (449) ಪರೀಕ್ಷೆಗೆ ಒಟ್ಟು 912 ಮಂದಿ ಉಡುಪಿ ಜಿಲ್ಲೆಯಲ್ಲಿ ಗೈರುಹಾಜರಾಗಿದ್ದಾರೆ.
ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎರಡನೇ ದಿನದ ಪರೀಕ್ಷೆಯಲ್ಲೂ ಯಾವುದೇ ಅಕ್ರಮ ವರದಿ ಯಾಗಿಲ್ಲ. ಎರಡನೇ ದಿನ ಬೆಳಗ್ಗೆ ನಡೆದ ಗಣಿತ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 8089 ಮಂದಿ ಹೆಸರು ನೊಂದಾಯಿಸಿದ್ದು, 7626 ಮಂದಿ ಪರೀಕ್ಷೆ ಬರೆದಿದ್ದಾರೆ. ಅದೇ ರೀತಿ ಜೀವಶಾಸ್ತ್ರ 4719 ಮಂದಿ ನೊಂದಾಯಿಸಿಕೊಂಡಿದ್ದು ಇವರಲ್ಲಿ 4270 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.