ಎ.12ರಂದು ಟ್ಯಾಪ್ಮಿಯ 39ನೇ ಘಟಿಕೋತ್ಸವ
Update: 2025-04-10 18:43 IST
ಮಣಿಪಾಲ, ಎ.10: ಮಣಿಪಾಲ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್(ಟ್ಯಾಪ್ಮಿ) ಮಾಹೆ ಇದರ 32ನೇ ಘಟಿಕೋತ್ಸವದ ಅಂಗವಾಗಿ 39ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಎ.12ರಂದು ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಆಂಧ್ರ ಪ್ರದೇಶದ ಹಣಕಾಸು, ಯೋಜನೆ, ವಾಣಿಜ್ಯ ತೆರಿಗೆ ಸಚಿವ ಪಯ್ಯವುಲ ಕೇಶವ ಹಾಗೂ ಮುಂಬೈನ ಕ್ಲಾಸಿಕ್ ಲೆಜೆಂಡ್ಸ್‌ನ ಮುಖ್ಯ ವಹಿವಾಟು ಅಧಿಕಾರಿ ಶರದ್ ಅಗರವಾಲ್ ಭಾಗವಹಿಸಲಿದ್ದಾರೆ. ಒಟ್ಟು524 ವಿದ್ಯಾರ್ಥಿಗಳಿಗೆ ಎಂಬಿಎ ಪದವಿ ಪ್ರದಾನವಾಗಲಿದೆ. ಮಾಹೆಯ ಸಹ ಕುಲಪತಿ ಡಾ.ಎಚ್.ಎಸ್.ಬಲ್ಲಾಳ್ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.