ಮಾ.15ರಂದು ಗ್ಲಾಕೋಮಾ ಕಣ್ಣಿನ ಉಚಿತ ತಪಾಸಣೆ
Update: 2025-03-13 18:20 IST

ಉಡುಪಿ, ಮಾ.13: ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಮಾ.15ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಉಚಿತ ಗ್ಲಾಕೋಮಾ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ.
ಗ್ಲಾಕೋಮಾ ಕಣ್ಣಿನ ಖಾಯಿಲೆಯು ಯಾವುದೇ ಮುನ್ಸೂಚನೆ ಇಲ್ಲದೇ ಮನುಷ್ಯನನ್ನು ದಷ್ಟಿಹೀನನನ್ನಾಗಿ ಮಾಡುವ ಖಾಯಿಲೆಯಾಗಿದೆ. ಗ್ಲಾಕೋಮಾ ಕಣ್ಣಿನ ರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಗ್ಲಾಕೋಮಾ ಸಪ್ತಾಹವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಿದೆ.