ಮಾ.20 ರಿಂದ ರಾಜ್ಯಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಸ್ಫರ್ಧೆ ‘ವರ್ಣೋತ್ಸವ’
ಶಿರ್ವ, ಮಾ.19: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 2024-25ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾ.20 ರಿಂದ 23ವರೆಗೆ ಕಾಲೇಜಿನ ಆವರಣದಲ್ಲಿ ಜರುಗಲಿವೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದ್ದಾರೆ.
ಬುಧವಾರ ಕಾಲೇಜಿನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.20 ಮತ್ತು 21ರಂದು ವಿದ್ಯಾರ್ಥಿ ಗಳಿಗಾಗಿ ರಾಜ್ಯಮಟ್ಟದ ತಾಂತ್ರಿಕ- ಸಾಂಸ್ಕೃತಿಕ ಸ್ಪರ್ಧೆ ವರ್ಣೋತ್ಸವವನ್ನು ಆಯೋಜಿಸ ಲಾಗಿದೆ. ಈ ಕಾರ್ಯ ಕ್ರಮವನ್ನು ಬೆಳಿಗ್ಗೆ 9.30ಕ್ಕೆ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಉದ್ಘಾಟಿಸಲಿರುವರು. ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿದೆ ಎಂದರು.
ಮಾ.21ರಂದು ಸಂಜೆ ಜರುಗುವ ವರ್ಣೋತ್ಸವದ ಸಮಾರೋಪದ ಅಧ್ಯಕ್ಷತೆಯನ್ನು ಸೋದೆ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾ.22ರಂದು ಅಪರಾಹ್ನ 3ಗಂಟೆಗೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಜರಗಲಿದೆ. ಮಾ.23ರಂದು ಬೆಳಗ್ಗೆ 10ಗಂಟೆಗೆ ಆಟೋ ಎಕ್ಸ್‌ಪೋ ದುಬಾರಿ ವಾಹನಗಳ ಪ್ರದರ್ಶನ ಮತ್ತು ಮಧ್ಯಾಹ್ನ 3 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಮಾವೇಶ ಸಮಾರಂಭ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ತಿರುಮಲೇಶ್ವರ ಭಟ್, ಸಂಯೋಜಕರಾದ ಸಚ್ಚಿನ್ ಪ್ರಭು ಕೆ., ಡಾ.ಶಿಲ್ಪಾ ಕಾಮತ್ ಉಪಸ್ಥಿತರಿದ್ದರು.