ಮಣಿಪಾಲ: ಆಧಾರ್ ಕಾರ್ಡಿನ ಬಗ್ಗೆ ಮೊಬೈಲ್ ಸಂದೇಶ ಕಳುಹಿಸಿ 2.55ಲಕ್ಷ ರೂ. ವಂಚನೆ
Update: 2024-05-24 21:16 IST
ಸಾಂದರ್ಭಿಕ ಚಿತ್ರ
ಮಣಿಪಾಲ: ಮೊಬೈಲ್‌ಗೆ ಆಧಾರ್ ಕಾರ್ಡಿನ ಬಗ್ಗೆ ಸಂದೇಶ ಕಳುಹಿಸಿ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 20ರಂದು ಮಣಿಪಾಲ ದಶರಥ ನಗರದ ಆಶಾಲತಾ ಆರ್.(32) ಎಂಬವರ ಮೊಬೈಲ್‌ಗೆ ಆಧಾರ ಕಾರ್ಡಿನ ಬಗ್ಗೆ ಸಂದೇಶ ಬಂದಿದ್ದು ಕೆಲವೇ ಕ್ಷಣದಲ್ಲಿ ಆಶಾಲತಾ ಅವರ ಬ್ಯಾಂಕ್ ಮತ್ತು ಆರ್‌ಡಿ ಖಾತೆಯಿಂದ ಯಾರೋ ಅಪರಿಚಿತರು 2,55,892ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡುವ ಮೂಲಕ ವಂಚನೆ ಎಸಗಿರುವುದಾಗಿ ದೂರಲಾಗಿದೆ.