ಬಿಸಿಎ ವಿದ್ಯಾರ್ಥಿಗಳಿಗೆ ಆ್ಯಂಡ್ರಾಯ್ಡ್ ಅಭಿವೃದ್ಧಿ ಕಾರ್ಯಾಗಾರ

Update: 2023-10-05 17:42 IST
ಬಿಸಿಎ ವಿದ್ಯಾರ್ಥಿಗಳಿಗೆ ಆ್ಯಂಡ್ರಾಯ್ಡ್ ಅಭಿವೃದ್ಧಿ ಕಾರ್ಯಾಗಾರ
  • whatsapp icon

ಶಿರ್ವ, ಅ.5: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಗಣಕ ಯಂತ್ರ ವಿಭಾಗದ ಪಠ್ಯೇತರ ಸಮಿತಿಯು ಉನ್ನತ ಭಾರತ ಅಭಿಯಾನ ದಡಿಯಲ್ಲಿ ಶಿರ್ವದ ಸಂತ ಮೇರಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಿಗಾಗಿ ಆ್ಯಂಡ್ರಾಯ್ಡ್ ಅಭಿವೃದ್ಧಿ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಸಂತ ಮೇರಿ ಕಾಲೇಜಿನ ಪ್ರಾಂಶುಪಾಲ ಡಾ.ಹೆರಾಲ್ಡ್ ಐವನ್ ಮೋನಿಸ್, ಮೌಲ್ಯ ವರ್ಧಿತ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು. ಉದ್ಯೋಗಾವಕಾಶವನ್ನು ಪಡೆಯಲು ಉತ್ತಮ ಪ್ರಾಜೆಕ್ಟ್ ಗಳ ಪ್ರಾಮುಖ್ಯ ತೆಯನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಕಾಲೇಜಿನ ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಕೆ.ಪ್ರವೀಣ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ವಹಿಸಿದ್ದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಗಣಕ ಯಂತ್ರ ವಿಭಾಗದ ಪ್ರಾಧ್ಯಾಪಕರಾದ ಸಹನಾ ಕಾರಂತ್ ಮತ್ತು ಸವಿತಾ ಶೆಣೈ ಉಪಸ್ಥಿತರಿದ್ದರು.

ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯಜೆ ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಪ್ರೀತಿ ಎಂ. ವಂದಿಸಿದರು. ಗಣಕ ಯಂತ್ರ ವಿಭಾಗದ ಪ್ರಾಧ್ಯಾಪಕಿ ಚೈತ್ರಾ ಭಟ್ ಕಾರ್ಯಕ್ರಮ ಸಂಯೋಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News