ಮಾದಕ ದ್ರವ್ಯ ವಿರೋಧಿ ಅಭಿಯಾನ ಕಾಲ್ನಡಿಗೆ ಜಾಥ

Update: 2023-09-04 15:01 GMT

ಬ್ರಹ್ಮಾವರ: ಎಸ್‌ಎಸ್‌ಎಫ್ ಗೋಲ್ಡನ್ ಪಿಪ್ಟಿ ಸಮ್ಮೇಳನದ ಪ್ರಯುಕ್ತ ಎಸ್‌ಎಸ್‌ಎಫ್ ಉಡುಪಿ ಡಿವಿಷನ್ ವತಿಯಿಂದ ಹಾಗೂ ಬ್ರಹ್ಮಾವರ ಸೆಕ್ಟರ್ ಮತ್ತು ಎಸ್‌ಎಸ್‌ಎಫ್, ಕೆಎಂಜೆ, ಖದೀಮಿ ಜಾಮಿಯ ಮಸೀದಿ ಹೊನ್ನಾಳ ಇದರ ಸಹಭಾಗಿತ್ವದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನದ ಕಾಲ್ನಡಿಗೆ ಜಾಥ, ರೈನ್ ಬೋ/ಕ್ಯಾಂಪಸ್ ವಿದ್ಯಾರ್ಥಿಗಳ ಗೋಲ್ಡನ್ ರ್ಯಾಲಿ, ಗೊಲ್ಡನ್ ಟೀ ಕೂಟ, ಗೋಲ್ಡನ್ ಜ್ಯೂಸ್ ಮತ್ತು ಪೀಪಲ್ ಕಾನ್ಪೆರೆನ್ಸ್ ನಡೆಯಿತು.

ಖದೀಮಿ ಜಾಮಿಯ ಮಸೀದಿಯ ದರ್ಗಾ ಶರೀಫ್ ಹಝ್ರತೇ ಹಜಾನಿಮಾ (ರ.ಅ)ರವರ ಝಿಯಾರತ್ ನೊಂದಿಗೆ ಪ್ರಾರಂಭಿಸಿ, ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಲಾಯಿತು. ಜಾಥದಲ್ಲಿ ಮಾದಕ ದ್ರವ್ಯ ಪಿಡುಗಿನ ವಿರುದ್ಧವಾಗಿ ಘೋಷ ವಾಕ್ಯಗಳು, ಸೌಹಾರ್ದ ಸಂದೇಶಗಳು, ಎಸ್‌ಎಸ್‌ಎಫ್ ಗೊಲ್ಡನ್ ಪಿಪ್ಟಿ ಸಮ್ಮೇಳನದ ಘೋಷ್ಯ ವಾಕ್ಯಗಳು ಪ್ರಸರಿಸ ಲಾಯಿತು. ಮಾದಕ ದ್ರವ್ಯ ವಿರೋಧಿ ಅಭಿಯಾನದ ಸಂದೇಶ ಕರಪತ್ರ ಸಾರ್ವಜನಿಕರಿಗೆ ವಿತರಿಸಲಾಯಿತು.

ಹೊನ್ನಾಳ ಬಸ್ ನಿಲ್ದಾಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಫಾಲಿಲಿ ಮಣಿಪುರ ದುವಾ ನೆರವೇರಿಸಿದರು. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಸುಬುಹಾನ್ ಅಹಮದ್ ಹೊನ್ನಾಳ ಉದ್ಘಾಟಿಸಿದರು. ಎಸ್‌ಎಸ್‌ಎಫ್ ನಾಯಕರಾದ ಮುಸ್ತಫಾ ಅಹ್ಸನಿ ಮೂಳೂರು ಮುಖ್ಯ ಸಂದೇಶ ನೀಡಿದರು.

ಡಿವಿಷನ್ ಕೋಶಾಧಿಕಾರಿ ಇಮ್ತಿಯಾಝ್ ಸಂತೋಷ್ ನಗರ ಹಾಗೂ ಇಮ್ತಿಯಾಝ್ ಹೊನ್ನಾಳ ಜಾಥದಲ್ಲಿ ಘೋಷವಾಕ್ಯ ನುಡಿದರು. ಉಡುಪಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿದರು. ಜಿಲ್ಲಾ ನಾಯಕ ನಾಸೀರ್ ಭದ್ರಗಿರಿ ವಂದಿಸಿದರು.

ಮುಖ್ಯ ಅತಿಥಿಯಾಗಿ ಖದೀಮಿ ಜಾಮಿಯ ಮಸೀದಿ ಅಧ್ಯಕ್ಷ ಮಹಮ್ಮದ್ ಗೌಸ್ ಹೊನ್ನಾಳ, ಪೋಸ್ಟ್ ಮಾಸ್ಟರ್ ನಾಗರಾಜ್, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ನಝೀರ್ ಸಾಸ್ತಾನ, ಗೊಲ್ಡನ್ ಟಿಂ ಉಸ್ತುವಾರಿ ಚೇಯರ್‌ಮೆನ್ ಶಂಶುದ್ದೀನ್ ರಂಗನಕೆರೆ, ಕನ್ವೀನರ್ ಆಸೀಫ್ ಸರಕಾರಿಗುಡ್ಡೆ, ಜಿಲ್ಲಾ ನಾಯಕ ಮುತ್ತಲಿಬ್ ರಂಗನಕೆರೆ, ಡಿವಿಷನ್ ನಾಯಕರಾದ ಮಜೀದ್ ಕಟಪಾಡಿ, ಇಬ್ರಾಹಿಂ ರಂಗನಕೆರೆ, ಹೆಲ್ಪ್‌ಡೆಸ್ಕ್ ಕನ್ವೀನರ್ ಬಿಲಾಲ್ ಮಲ್ಪೆ, ಕ್ಯಾಂಪಸ್ ಕಾರ್ಯದರ್ಶಿ ರಹೀಂ ಸಾಸ್ತಾನ, ರೈನ್ಭೊ ಕಾರ್ಯದರ್ಶಿ ಅನ್ಸಾರ್ ಸಂತೋಷ್ ನಗರ, ಮೀಡಿಯಾ ಕಾರ್ಯದರ್ಶಿಗಳಾದ ಅಲ್ಪಾಝ್ ಕಟಪಾಡಿ, ಆಶಿಕ್ ಸರಕಾರಿ ಗುಡ್ಡೆ, ಅನಾಸ್ ಮೊದಲಾದವರು ಉಪಸ್ಥಿತರಿದ್ದರು. ಕೆಎಂಜೆ ಬ್ರಹ್ಮಾವರ ತಾಲೂಕು ಅಧ್ಯಕ್ಷ ಮುಸ್ತಾಕ್ ಅಹಮದ್ ಹೊನ್ನಾಳ ಹಾಗೂ ಬ್ರಹ್ಮಾವರ ಪೋಲಿಸ್ ಠಾಣಾಧಿಕಾರಿ ಶುಭಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News