ಬೈಕ್ ಪಲ್ಟಿ: ಸವಾರ ಸ್ಥಳದಲ್ಲಿಯೇ ಮೃತ್ಯು

Update: 2023-09-08 13:23 GMT

ಅಮಾಸೆಬೈಲು, ಸೆ.೮: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಸೆ.7ರಂದು ರಾತ್ರಿ ವೇಳೆ ಶೇಡಿಮನೆ ಗ್ರಾಮದ ಬಾಗಳಮಕ್ಕಿ ಎಂಬಲ್ಲಿ ನಡೆದಿದೆ.

ಮೃತರನ್ನು ಶೇಡಿಮನೆ ಚಕ್ಕರಮಕ್ಕಿ ನಿವಾಸಿ ಅಪ್ಪು ಪೂಜಾರಿಯ ಮಗ ಸುಧಾಕರ ಪೂಜಾರಿ (35) ಎಂದು ಗುರುತಿಸಲಾಗಿದೆ.

ಇವರು ಶೇಡಿಮನೆ ಮಾಯಾ ಬಜಾರ್‌ನಲ್ಲಿರುವ ತನ್ನ ಅಂಗಡಿಯನ್ನು ಬಂದ್ ಮಾಡಿ ಬೈಕಿನಲ್ಲಿ ಶೇಡಿಮನೆ -ಮಾಂಡಿ ಮೂರುಕೈ ರಸ್ತೆಯಲ್ಲಿ ಹೋಗುತ್ತಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಲ್ಲಿ ಸ್ಕೀಡ್ ಆಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುಧಾಕರ್ ಪೂಜಾರಿ ಸ್ಥಳದಲ್ಲಿಯೇ ಮೃತ ಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News