ಜಿಲ್ಲಾಡಳಿತದ ವಿರುದ್ಧ ರಾತ್ರಿಯೂ ಮುಂದುವರಿದ ಬೈಂದೂರು ಶಾಸಕರ ಧರಣಿ; ಜಿಲ್ಲೆಯ ಮೂವರು ಶಾಸಕರ ಬೆಂಬಲ

Update: 2024-08-13 10:59 IST
ಜಿಲ್ಲಾಡಳಿತದ ವಿರುದ್ಧ ರಾತ್ರಿಯೂ ಮುಂದುವರಿದ ಬೈಂದೂರು ಶಾಸಕರ ಧರಣಿ; ಜಿಲ್ಲೆಯ ಮೂವರು ಶಾಸಕರ ಬೆಂಬಲ
  • whatsapp icon

ಕುಂದಾಪುರ: ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೋಮವಾರ ಸಂಜೆಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ಆರಂಭಿಸಿದ ಅಹೋರಾತ್ರಿ ಧರಣಿಗೆ ಉಡುಪಿ ಜಿಲ್ಲೆಯ ಕುಂದಾಪುರ, ಕಾಪು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಾತ್ರಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿಯವರು ತಡರಾತ್ರಿ ಆಗಮಿಸಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋ‌ರ್ ಕುಮಾ‌ರ್ ಕುಂದಾಪುರ, ಬಿಜೆಪಿಯ ಹಿರಿಯ ಮುಖಂಡ ರಾಜೇಶ್ ಕಾವೇರಿ, ಬೈಂದೂರು ಬಿಜೆಪಿ‌ಮಂಡಲದ ಅಧ್ಯಕ್ಷ‌ ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ಮಂಡಲದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಗೋಪಾಡಿ ಮೊದಲಾದವರಿದ್ದರು.

ರಾತ್ರಿಯಿಡೀ ನಡೆದ ಧರಣಿ ಸತ್ಯಾಗ್ರಹದಲ್ಲಿ ಬೈಂದೂರಿನ ನೂರಾರು ಬಿಜೆಪಿ ಕಾರ್ಯಕರ್ತರು ಶಾಸಕ ಗುರುರಾಜ್ ಗಂಟಿಹೊಳೆಯವರ ಧರಣಿಗೆ  ಕೈ ಜೋಡಿಸಿದರು. ಮಂಗಳವಾರವೂ ಧರಣಿ ಮುಂದುವರಿದಿದ್ದು ಡಿಸಿ ಹಾಗೂ ಎಸ್ಪಿ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News