ಕರಾವಳಿ ವಕೀಲರ ಕಲರವ ಕಾರ್ಯಕ್ರಮ

Update: 2023-11-11 21:47 IST
ಕರಾವಳಿ ವಕೀಲರ ಕಲರವ ಕಾರ್ಯಕ್ರಮ
  • whatsapp icon

ಕುಂದಾಪುರ : ವೃತ್ತಿ ಬದುಕಿನಲ್ಲಿ ನ್ಯಾಯಾಧೀಶರು, ವಕೀಲರು ಸದಾ ಒತ್ತಡವನ್ನು ಎದುರಿಸುತ್ತಿರುತ್ತಾರೆ. ಒತ್ತಡ, ಆತಂಕ ನಿವಾರಣೆಗೆ ಸಂಗೀತ, ಕಲೆಯಂತಹ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಲಿದೆ. ಇಂತಹ ವಕೀಲರ ಸಮ್ಮಿಲನ ಕಾರ್‍ಯಕ್ರಮ ಎಲ್ಲ ಕಡೆ‌ ನಡೆದಾಗ ಒತ್ತಡ ನಿವಾರಣೆ ಸಾಧ್ಯ. ಸ್ಪರ್ಧೆಯಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳಿ ಎಂದು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಅವರು ಶನಿವಾರ ಕುಂದಾಪುರ ಬಾರ್ ಅಸೋಸಿಯೇಶನ್ ವತಿಯಿಂದ ಇಲ್ಲಿನ ಆರ್. ಶೆಟ್ಟಿ ಸಭಾಂಗಣದಲ್ಲಿ ಮೊದಲ ಬಾರಿಗೆ ದ.ಕ. ಹಾಗೂ ಉಡುಪಿ ಜಿಲ್ಲೆಯ ವಕೀಲರಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ - ಕರಾವಳಿ ವಕೀಲರ ಕಲರವ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಲೋಕಾಯುಕ್ತದ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕಗೊಂಡ ಕೆ. ಪ್ರಸನ್ನ ಶೆಟ್ಟಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ವಕೀಲರ ಕಲರವ ಎನ್ನುವುದು ಒಂದು ಉತ್ತಮ ಕಾರ್‍ಯಕ್ರಮ. ವಿಭಿನ್ನ ಕಾರ್‍ಯಕ್ರಮ ಆಯೋಜಿಸುವುದರಲ್ಲಿ ಕುಂದಾಪುರ ವಕೀಲರ ಸಂಘ ಮುಂಚೂಣಿಯಲ್ಲಿದ್ದಾರೆ ಎಂದು ಶ್ಲಾಘಿಸಿದರು.

ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಽಶ ಅಬ್ದುಲ್ ರಹೀಂ ಹುಸೇನ್ ಶೇಖ್, ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಶ್ರುತಿ ಎಸ್., ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಽಶೆ ರೋಹಿಣಿ ಡಿ., ನ್ಯಾಯಾಧೀಶರಾದ ಅರುಣಾ ಸೋಮನಾಥ ಹೆಗ್ಡೆ ಬನ್ನಾಡಿ, ಶರ್ಮಿಳಾ, ವಕೀಲರ ಸಂಘದ ಉಪಾಧ್ಯಕ್ಷೆ ಬೀನಾ ಜೋಸೆಫ್, ಜತೆ ಕಾರ್‍ಯದರ್ಶಿ ರಿತೇಶ್ ಬಿ., ಕೋಶಾಽಕಾರಿ ದಿನಕರ ಕುಲಾಲ್ ಹಾಲಾಡಿ, ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ವಕೀಲರ ಸಂಘದ ಅ‘ಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ಪ್ರ. ಕಾರ್‍ಯದರ್ಶಿ ಜೆ. ಶ್ರೀನಾಥ್ ರಾವ್ ವಂದಿಸಿದರು. ಸಂಯೋಜಕ ಶ್ಯಾಂ ಸುಂದರ್ ನಾಯರಿ ಪ್ರಸ್ತಾವಿಸಿದರು.

ನ್ಯಾಯವಾದಿಗಳಾದ ರಾಜಾರಾಂ ಶೆಟ್ಟಿ ಪರಿಚಯಿಸಿ, ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News